’₹ 108 ಕೋಟಿ ವೆಚ್ಚದಲ್ಲಿ ಮೇಘಾ ಡೈರಿ‘

7
ರಾಮಸಾಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆ

’₹ 108 ಕೋಟಿ ವೆಚ್ಚದಲ್ಲಿ ಮೇಘಾ ಡೈರಿ‘

Published:
Updated:
ಕಂಪ್ಲಿ ತಾಲ್ಲೂಕು ರಾಮಸಾಗರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ರಾಬಕೊ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಎಂ. ಗುರುಸಿದ್ದನಗೌಡ ಬುಧವಾರ ಸಂಜೆ ಉದ್ಘಾಟಿಸಿದರು

ಕಂಪ್ಲಿ: ‘ದೊರೆಯುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಜಾಣ್ಮೆಯನ್ನು ಮಹಿಳೆ ರೂಢಿಸಿಕೊಳ್ಳಬೇಕು’ ಎಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತ ಅಧ್ಯಕ್ಷ ಎಂ. ಗುರುಸಿದ್ದನಗೌಡ ಸಲಹೆ ನೀಡಿದರು.

ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಬುಧವಾರ ಸಂಜೆ ರಾಮಸಾಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

‘ಬಳ್ಳಾರಿಯಲ್ಲಿ ₹ 108 ಕೋಟಿ ವೆಚ್ಚದಲ್ಲಿ ಮೇಘಾ ಡೈರಿ ಮತ್ತು ₹ 50 ಕೋಟಿ ವೆಚ್ಚದಲ್ಲಿ ಫ್ಲೆಕ್ಸಿ ಪ್ಯಾಕ್‌ ಯೂನಿಟ್‌ ಆರಂಭಿಸಲಾಗುವುದು. ಹೈನುಗಾರಿಕೆ ಪ್ರಗತಿಗಾಗಿ ₹ 1.2 ಲಕ್ಷ ಸಾಲ ನೀಡುವ ಮೂಲಕ ಎರಡು ಆಕಳು ಕೊಡಿಸಲಾಗುತ್ತದೆ. ಹಾಲಿನ ಡೈರಿ ಆರಂಭಕ್ಕೆ ಶೇ 3ರ ಮಧ್ಯಮಾವಧಿ ಸಾಲವಾಗಿ ₹ 10 ಲಕ್ಷ ಸಾಲವನ್ನು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರಿಗೆ ನೀಡಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ₹ 15 ಕೋಟಿ ಸಾಲ ವಿತರಿಸಲಾಗಿದೆ’ ಎಂದು ವಿವರಿಸಿದರು.

ರಾಬಕೊ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಜೆ.ಕೆ. ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಹೈನುಗಾರಿಕೆಯಿಂದ ಮಾತ್ರ ರೈತರ ಜೀವನ ಸುಧಾರಣೆ ಸಾಧ್ಯ. ಕೃಷಿ ಜಮೀನಿದ್ದರೂ ನೀರಿಲ್ಲದೆ ಕಂಗಾಲಾಗಿರುವ ರೈತರಿಗೆ ಹಾಲು ಉತ್ಪಾದನೆ ಕಾಮಧೇನುವಿನಂತೆ. ಡೈರಿಗಳಿಗೆ ಹಾಲು ಹಾಕಿ ಅದರಿಂದ ಬರುವ ಹಣದಿಂದ ಬಹಳಷ್ಟು ರೈತ ಕುಟುಂಬಗಳು ಸ್ವಾವಲಂಬನೆ ಸಾಧಿಸಿವೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್. ಜಗದೀಶಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನೆ ಪಾರ್ವತಮ್ಮ, ಉಪಾಧ್ಯಕ್ಷೆ ಅಕ್ಕಿಗಾಯತ್ರಿ, ರಾಮಸಾಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಿ. ಶಂಕ್ರಮ್ಮ ಬಸವರಾಜ, ಮುಖಂಡ ಬಿ. ನಾರಾಯಣಪ್ಪ, ಮಾಜಿ ಸೈನಿಕ ಮಂಜುನಾಥ ನಾಯಕ, ಪುರುಸಿದ್ದಪ್ಪ, ಡಿ. ಕನಕರಾಯ, ಮಿಷಿನ್ ಕೃಷ್ಟಪ್ಪ, ಬಿ. ವಿರೂಪಾಕ್ಷಸ್ವಾಮಿ, ಮಹಿಳಾ ಸಂಘದ ಉಪಾಧ್ಯಕ್ಷೆ ಬಿ. ಮಂಜುಳಾ, ಕಾರ್ಯದರ್ಶಿ ನಾಗಮ್ಮ, ಸದಸ್ಯೆಯರಾದ ಬಿ. ಸುವರ್ಣಮ್ಮ, ಡಿ. ಜಯ, ಸಹಾಯಕ ಶ್ರೀನಿವಾಸ್ ಸೇರಿದಂತೆ ಸಂಘದ ಸದಸ್ಯೆಯರು, ರೈತ ಮಹಿಳೆಯರು, ಗ್ರಾಮಸ್ಥರು, ಒಕ್ಕೂಟದ ಸಮಾಲೋಚಕ ರಾಮಚಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !