ಕಮಲಾಪುರ ಪಟ್ಟಣ ಪಂಚಾಯಿತಿ: ಕೊನೆ ದಿನ 103 ನಾಮಪತ್ರ ಸಲ್ಲಿಕೆ

ಭಾನುವಾರ, ಮೇ 26, 2019
32 °C
17ರಂದು ನಾಮಪತ್ರ ಪರಿಶೀಲನೆ; ಒಟ್ಟು 137 ನಾಮಪತ್ರ

ಕಮಲಾಪುರ ಪಟ್ಟಣ ಪಂಚಾಯಿತಿ: ಕೊನೆ ದಿನ 103 ನಾಮಪತ್ರ ಸಲ್ಲಿಕೆ

Published:
Updated:
Prajavani

ಹೊಸಪೇಟೆ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಗೆ ಗುರುವಾರ ವಿವಿಧ ಪಕ್ಷಗಳ 103 ಜನ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ನಿಂದ ಒಟ್ಟು 37 ಜನ ನಾಮಪತ್ರ ಸಲ್ಲಿಸಿದರು. ಈ ಪೈಕಿ 20 ಜನ ಪಕ್ಷದ ‘ಬಿ’ ಫಾರಂ ನೀಡಿದರು. ಬಿಜೆಪಿಯಿಂದ ಒಟ್ಟು 31 ಜನ ಉಮೇದುವಾರಿಕೆ ಸಲ್ಲಿಸಿದರು. ಅದರಲ್ಲಿ 20 ಜನ ‘ಬಿ‘ ಫಾರಂ ಕೊಟ್ಟರು. ಜೆ.ಡಿ.ಎಸ್‌.ನಿಂದ ಎಂಟು, ಬಿ.ಎಸ್‌.ಪಿ., ಆರ್‌.ಪಿ.ಐ.ನಿಂದ ತಲಾ ಒಬ್ಬರು, 45 ಜನ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಇದುವರೆಗೆ ಒಟ್ಟು 137 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರಗಳ ಪರಿಶೀಲನೆ ಮೇ 17ರಂದು ನಡೆಯಲಿದೆ.

ಇದಕ್ಕೂ ಮುನ್ನ ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ರಜಪೂತ ಕೋಟೆಯಿಂದ ಪ್ರಮುಖ ಮಾರ್ಗಗಳ ಮೂಲಕ ಪಟ್ಟಣ ಪಂಚಾಯಿತಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು.

ಮಾಜಿ ಶಾಸಕ ರತನ್ ಸಿಂಗ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಾಜಿ ಹೇಮಣ್ಣ, ಎಂ.ರಫೀಕ್, ಸಮೀವುಲ್ಲಾ, ಅಂಗಡಿ ನಾಗರಾಜ, ರಾಮರೆಡ್ಡಿ , ಮುಕ್ತಿಯಾ ಪಾಷ, ಓಬಯ್ಯ, ಶೋಯಬ್‌, ಎಚ್. ಸೋಮಶೇಖರ್, ಡಿ.ಬಿ.ಆರ್ ಮಳಲಿ, ಗೋಪಾಲ ಕೃಷ್ಣ, ತಮ್ಮನಳ್ಳೆಪ್ಪ, ರಾಮಕೃಷ್ಣ, ಜೀವರತ್ನಂ, ಜಾಕೀರ್ ಬೇಕರಿ, ದಾದಾ ಕಲಂದರ್ ಇದ್ದರು.

ಬಿಜೆಪಿ ರ್‍ಯಾಲಿ:

ಪಟ್ಟಣದ ಕೃಷ್ಣದೇವರಾಯ ವೃತ್ತದಿಂದ ಪಟ್ಟಣ ಪಂಚಾಯಿತಿ ಕಚೇರಿ ವರೆಗೆ ರ್‍ಯಾಲಿಯಲ್ಲಿ ಬಂದು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಮುಖಂಡರಾದ ವಿನಾಯಕ ಸ್ವಾಮಿ, ವೆಂಕಟೇಶ, ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ಎಸ್‌.ಎಸ್‌. ರಾಚಯ್ಯ, ನೂರುಲ್ಲಾ ಖಾದ್ರಿ, ಗುರು, ಸತ್ಯನಾರಾಯಣ, ದೇವರಾಜ ಮೇಟಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !