ಸೋಮವಾರ, ಏಪ್ರಿಲ್ 19, 2021
31 °C

16ಜೋಡಿ ಹಸೆಮಣೆಗೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದ ಆಮೋಘಾಶ್ರಮದಲ್ಲಿ ಶರಣ ಸಿದ್ದಯ್ಯತಾತನವರ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಶುಕ್ರವಾರ ನಡೆದ 16ಜೋಡಿ ಸಾಮೂಹಿಕ ವಿವಾಹದಲ್ಲಿ ಶಾಸಕ ಜೆ.ಎನ್‌. ಗಣೇಶ್‌ ಇತರರು ಪಾಲ್ಗೊಂಡಿದ್ದರು

ಕಂಪ್ಲಿ: ‘ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರದಾನವಾಗಿವೆ’ ಎಂದು ಶಾಸಕ ಜೆ.ಎನ್‌. ಗಣೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೇವಲಾಪುರ ಗ್ರಾಮದ ಆಮೋಘಾಶ್ರಮದಲ್ಲಿ ಶರಣ ಸಿದ್ದಯ್ಯತಾತನವರ ನೂತನ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಿಮಿತ್ತ 16ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಸಂಸ್ಥೆಗಳು, ಮಠ-ಮಾನ್ಯಗಳು ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡವರಿಗೆ ನೆರವಾಗಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ. ಸಮಾಜ ಇಂತಹ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಹೇಳಿದರು.
ಆಮೋಘಾಶ್ರಮದ ಒಡೆಯರ ಅಮೋಘಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬುಕ್ಕಸಾಗರದ ವಿಶ್ವಾರಾಧ್ಯ ಶಿವಾಚಾರ್ಯರು ಸಿದ್ದಯ್ಯತಾತನವರ ನೂತನ ಶಿಲಾಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಮುದೇನೂರು ಮಲ್ಲಯ್ಯತಾತ, ಕುರೆಕುಪ್ಪದ ಶರಣಪ್ಪತಾತ, ರೋಹಿತಯ್ಯಸ್ವಾಮಿ, ಗುರುಲಿಂಗಯ್ಯಸ್ವಾಮಿ, ಶರಣಯ್ಯಸ್ವಾಮಿ, ರೇವಣಸಿದ್ದಯ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಎಂ. ಸುಧೀರ್, ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ಡಿ. ಮಹಾದೇವ, ಗ್ರಾಮ ಪಂಚಾಯಿತ ಅಧ್ಯಕ್ಷ ಗೌಡ್ರ ಬುಡುಗಣ್ಣ, ಉಪಾಧ್ಯಕ್ಷೆ ಮಾರೆಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ರುದ್ರಪ್ಪ, ಉಪಾಧ್ಯಕ್ಷೆ ಗೌಡ್ರು ಸುಂಕಮ್ಮ, ಸಿದ್ದಯ್ಯ, ಜಿ. ಮರೇಗೌಡ, ಜಿ. ಅಂಜಿನಪ್ಪ, ಜಿ. ಲಿಂಗನಗೌಡ, ಅಂಗಡಿ ಜಂಬಣ್ಣ, ಮಾವಿನಹಳ್ಳಿ ಎಸ್‌. ಬಸವರಾಜ, ಕುರಿ ಮಳ್ಳಪ್ಪ, ಎಸ್. ಗಾದಿಲಿಂಗಪ್ಪ, ಜಿ. ಜಂಬಯ್ಯ, ಜಿ. ಚಂದ್ರಪ್ಪ ಸೇರಿದಂತೆ ಅನೇಕ ಸದ್ಭಕ್ತರು ಪಾಲ್ಗೊಂಡಿದ್ದರು.

ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಹಮ್ಮಿಕೊಂಡಿದ್ದ ಗೂಳ್ಯಂ ಗಾದಿಲಿಂಗೇಶ್ವರ ಪುರಾಣ ಮಹಾಮಂಗಲಗೊಂಡಿತು. ವಿಶ್ವನಾಥಪ್ಪ ಪುರಾಣ ಪ್ರವಚನ, ಶಿವಾನಂದಶಾಸ್ತ್ರಿಗಳ ಪುರಾಣ ಪಠಣಕ್ಕೆ ಪಾಲಾಕ್ಷಪ್ಪ ಮಾಸ್ತರ್ ಹಾರ್ಮೋನಿಯಂ ಮತ್ತು ಸಿ.ಡಿ. ವಿರೂಪಾಕ್ಷಪ್ಪ ತಬಲಾಸಾಥ್‌ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು