ಶುಕ್ರವಾರ, ನವೆಂಬರ್ 22, 2019
20 °C

1,817 ಕೆ.ಜಿ. ಪ್ಲಾಸ್ಟಿಕ್‌ ವಶಕ್ಕೆ

Published:
Updated:
Prajavani

ಹೊಸಪೇಟೆ: ನಗರಸಭೆ ಅಧಿಕಾರಿಗಳು ನಗರದ ಹಲವು ಮಳಿಗೆಗಳ ಮೇಲೆ ಬುಧವಾರ ದಾಳಿ ನಡೆಸಿ, 1,817 ಕೆ.ಜಿ. ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಪ್ಲಾಸ್ಟಿಕ್‌ ವಸ್ತುಗಳ ಮೇಲೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಪ್ಲಾಸ್ಟಿಕ್‌ ಕಪ್‌, ತಟ್ಟೆ, ಕ್ಯಾರಿಬ್ಯಾಗ್‌ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಗೆ ಮೇರೆಗೆ ದಾಳಿ ನಡೆಸಿ, ವಶಪಡಿಸಿಕೊಳ್ಳಲಾಗಿದೆ’ ಎಂದು ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆರೋಗ್ಯ ಇನ್‌ಸ್ಪೆಕ್ಟರ್‌ ಸತ್ಯನಾರಾಯಣ ಶರ್ಮಾ, ನಗರಸಭೆ ಸಿಬ್ಬಂದಿ ವೆಂಕಟೇಶ ಹವಾಲ್ದಾರ, ಪ್ರಕಾಶ ಬಾಬು, ಜಯಪ್ರಕಾಶ, ನಾಗೇಂದ್ರ ಶರ್ಮಾ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)