ಇಬ್ಬರು ಪೊಲೀಸರ ರಕ್ಷಣೆ

7

ಇಬ್ಬರು ಪೊಲೀಸರ ರಕ್ಷಣೆ

Published:
Updated:

ಹೊಸಪೇಟೆ: ತಾಲ್ಲೂಕಿನ ಹಂಪಿಯ ವಿರೂಪಾಕ್ಷೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲಿ ಈಜಾಡಲು ಹೋಗಿ ಕೊಚ್ಚಿಕೊಂಡು ಹೋಗುತ್ತಿದ್ದ ಮಹಾರಾಷ್ಟ್ರದ ಇಬ್ಬರು ಪೊಲೀಸರನ್ನು ಸ್ಥಳೀಯರು ಶುಕ್ರವಾರ ರಕ್ಷಿಸಿದ್ದಾರೆ.

‘ಮಹಾರಾಷ್ಟ್ರದ ಪೊಲೀಸರು ಹಂಪಿ ನೋಡಲು ಬಂದಿದ್ದರು. ಈ ವೇಳೆ ಇಬ್ಬರು ನದಿಯಲ್ಲಿ ಈಜಾಡುತ್ತಿದ್ದಾಗ ಕೊಚ್ಚಿಕೊಂಡು ಹೋಗುತ್ತಿದ್ದರು. ಸ್ಥಳದಲ್ಲಿ ದೋಣಿ ಓಡಿಸುವವರು ಗಮನಿಸಿ ತಕ್ಷಣವೇ ಅವರನ್ನು ರಕ್ಷಿಸಿ ಮೇಲೆ ತಂದಿದ್ದಾರೆ’ ಎಂದು ಹಂಪಿ ಠಾಣೆ ಸಿಪಿಐ ರವಿಕುಮಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !