ಬಳ್ಳಾರಿ ಉಪಚುನಾವಣೆಯಲ್ಲಿ ಮತದಾರರ ನಿರುತ್ಸಾಹ: ಶೇ 61.12 ಮತದಾನ

7
ಮತ ಎಣಿಕೆ ಮಂಗಳವಾರ: ಕುತೂಹಲಕ್ಕೆ ತೆರೆ ಬೀಳಲು ಗಂಟೆಗಳ ಲೆಕ್ಕ

ಬಳ್ಳಾರಿ ಉಪಚುನಾವಣೆಯಲ್ಲಿ ಮತದಾರರ ನಿರುತ್ಸಾಹ: ಶೇ 61.12 ಮತದಾನ

Published:
Updated:

ಬಳ್ಳಾರಿ: ಲೋಕಸಭೆ ಉಪಚುನಾವಣೆಗೆ ಜಿಲ್ಲೆಯಲ್ಲಿ ಶನಿವಾರ ಶೇ 61.12ರಷ್ಟು ಮತದಾನ ನಡೆದಿದೆ. ಆ ಮೂಲಕ ಕ್ಷೇತ್ರದ ಮತದಾರರು ಚುನಾವಣೆಗೆ ತಮ್ಮ ನಿರುತ್ಸಾಹವನ್ನು ದಾಖಲಿಸಿದ್ದಾರೆ.

ಇವಿಎಂ ಯಂತ್ರಗಳಲ್ಲಿ ದಾಖಲಾದ ಮಾಹಿತಿಯನ್ನು ಕ್ರೋಢೀಕರಿಸುವ ಕಾರ್ಯ ರಾತ್ರಿ 10.30 ಆದರೂ ಪೂರ್ಣಗೊಂಡಿರಲಿಲ್ಲ. ಮತದಾನದ ಕುರಿತು ಅಂಕಿ–ಅಂಶ ಅಂತಿಮಗೊಂಡಿರಲಿಲ್ಲ. 

ಆದರೆ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ 63.85ರಷ್ಟು ಮತದಾನ ನಡೆದಿದೆ ಎಂದು ತೋರಿಸಿತ್ತು. ಅದನ್ನೆ ಮತದಾರರೂ ನಂಬಿದ್ದರು. ಆದರೆ ಅಧಿಕಾರಿಗಳು ಮಾತ್ರ, ಅದು ಸರಿಯಾದ ಅಂಕಿ ಅಂಶವಲ್ಲ. ಅದು ಇನ್ನೂ ಅಂತಿಮಗೊಳ್ಳಬೇಕಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ 69.83 ಮತದಾನ ನಡೆದಿತ್ತು. ಈ ಪ್ರಮಾಣದಷ್ಟು ಮತದಾನ ಉಪಚುನಾಣೆಯಲ್ಲಿ ನಡೆಯದೇ ಇದ್ದರೂ, ಮತದಾನ ಪ್ರಮಾಣ ತೀವ್ರವಾಗಿ ಕುಸಿಯಬಹುದು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸಮಾಧಾನಕರ ಪ್ರಮಾಣದಲ್ಲಿ ಮತದಾನ ನಡೆದಿದೆ. ಹಿಂದಿನ ಚುನಾವಣೆಯ ಮತದಾನಕ್ಕಿಂತಲೂ ಶೇ 8.71ರಷ್ಟು ಕಡಿಮೆ ಮತದಾನವಾಗಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ ಶೇ 73.62, 2018ರ ಚುನಾವಣೆಯಲ್ಲಿ ಶೇ 74.13ರಷ್ಟು ಮತದಾನ ನಡೆದಿತ್ತು.

ಮಹಿಳೆಯರು ಕಡಿಮೆ
ಜಿಲ್ಲೆಯಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರು ಹೆಚ್ಚಿದ್ದಾರೆ. ಆದರೆ ಪುರುಷರ ಮತದಾನದ ಪ್ರಮಾಣವೇ ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !