ರಾಜ್ಯ ಮಟ್ಟದ ಹಿರಿಯರ ಈಜು ಸ್ಪರ್ಧೆ: ಜಿಲ್ಲೆಗೆ 9 ಚಿನ್ನ, 11 ಬೆಳ್ಳಿ, 2 ಕಂಚು!

7

ರಾಜ್ಯ ಮಟ್ಟದ ಹಿರಿಯರ ಈಜು ಸ್ಪರ್ಧೆ: ಜಿಲ್ಲೆಗೆ 9 ಚಿನ್ನ, 11 ಬೆಳ್ಳಿ, 2 ಕಂಚು!

Published:
Updated:

ಬಳ್ಳಾರಿ: ಬೆಂಗಳೂರಿನಲ್ಲಿ ಸೆ.1 ಮತ್ತು 2ರಂದು ನಡೆದ 20ನೇ ರಾಜ್ಯ ಮಟ್ಟದ ಹಿರಿಯರ ಈಜು ಸ್ಪರ್ಧೆಯಲ್ಲಿ ಜಿಲ್ಲೆಯ 8 ಹಿರಿಯರು ವಿವಿಧ ವಯೋಮಿತಿಯ ಸ್ಪರ್ಧೆಗಳಲ್ಲಿ 9 ಚಿನ್ನ, 11 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗಳಿಸಿದರು.

55–59 ವಯೋಮಿತಿ

ವಿಜಯನಗರ ಅಕ್ವಾಟಿಕ್ ಕೇಂದ್ರದ ರಜಿನಿ ಲಕ್ಕಾ ಅವರು 100 ಮೀಟರ್‌ನ ಬ್ಯಾಕ್ ಸ್ಟ್ರೋಕ್, ಬಟ್ಟರ್ ಫ್ಲೈ ಸ್ಪರ್ಧೆಯಲ್ಲಿ 2 ಬಂಗಾರ, 4x50 ಮೀಟರ್ ಫ್ರೀ ರೀಲೆ ಮತ್ತು ಮಿಡ್ ರೀಲೆಯಲ್ಲಿ 2 ಬಂಗಾರ ಹಾಗೂ 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಬ್ರೀಸ್ಟ್ ಸ್ಟ್ರೋಕ್ ನಲ್ಲಿ 2 ಕಂಚು ಪದಕ ಪಡೆದರು.

ಅದೇ ವಿಭಾಗದಲ್ಲಿ ಶಾಂತಾ ಬಾಯಿ ಅವರು 50 ಮೀಟರ್‌ ಬ್ಯಾಕ್ ಸ್ಟ್ರೋಕ್ ಮತ್ತು ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ಬೆಳ್ಳಿ ಹಾಗೂ 50 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ 1 ಕಂಚು ಗಳಿಸಿದರು.

40–44 ವಯೋಮಿತಿ: ಡಾ.ಬಸವರಾಜ್ ಅವರು 200 ಮತ್ತು 100 ಮೀಟರ್ ಫ್ರೀ ಸ್ಟೈಲ್‌ನಲ್ಲಿ 2 ಬೆಳ್ಳಿ ಪದಕ ಗಳಿಸಿದರು.

35ರಿಂದ 39 ವಯೋಮಿತಿ

50, 100 ಮತ್ತು 200 ಮೀಟರ್ ಮೀಟರ್ ಫ್ರೀ ಸ್ಟೈಲ್‌ನಲ್ಲಿ ಸುಭಾಷ್ ಪವಾರ್ 3 ಬೆಳ್ಳಿ ಹಾಗೂ 400 ಮೀಟರ್‌ನಲ್ಲಿ 1 ಕಂಚು. ಮಹದೇವ್ ಕಾಳೆ ಅವರು 200 ಮೀಟರ್ ಐಎಮ್‌ನಲ್ಲಿ 1 ಚಿನ್ನ, 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ 2 ಬೆಳ್ಳಿ ಹಾಗೂ 100 ಮೀಟರ್ ಬಟ್ಟರ್ ಫ್ಲೈನಲ್ಲಿ 1 ಬೆಳ್ಳಿ ಪದಕ ಗಳಿಸಿದರು.

30–34 ವಯೋಮಿತಿ

ಈ ವಿಭಾಗದ 50 ಮೀಟರ್ ನ ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರವೀಣ ಅವರು 1 ಬಂಗಾರ, 100 ಮೀಟರ್ ಬ್ಯಾಕ್ ಸ್ಟ್ರೋಕ್ ಹಾಗೂ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ 2 ಬೆಳ್ಳಿ ಪದ ಪಡೆದರು.

25ರಿಂದ 29 ವಯೋಮಿತಿ: ಜೆಎಸ್ಡಬ್ಲ್ಯೂ ನ ನೂಮಲ್ ಹಜಾರಿಕಾ ಅವರು 400 ಮತ್ತು 100 ಮೀಟರ್ ಫ್ರೀ ಸ್ಟೈಲ್‌ನಲ್ಲಿ 2 ಚಿನ್ನ, 200 ಮೀಟರ್‌ನಲ್ಲಿ 1 ಬೆಳ್ಳಿ ಹಾಗೂ 50 ಮೀಟರ್‌ ಬ್ಯಾಕ್ ಸ್ಟ್ರೋಕ್ನಲ್ಲಿ 1 ಬೆಳ್ಳಿ ಪದಕ ಗಳಿಸಿದರು. ಅದೇ ವಿಭಾಗದ 100 ಮತ್ತು 50 ಮೀಟರ್ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಇಂದ್ರಾನಿಲ್ ಕಾಳೆ 2 ಬೆಳ್ಳಿ ಪದಕ ಗಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !