ಬುಧವಾರ, ನವೆಂಬರ್ 20, 2019
27 °C

ಅನುಮತಿ ಪಡೆಯದ 9 ಫ್ಲೆಕ್ಸ್‌ ತೆರವು

Published:
Updated:

ಹೊಸಪೇಟೆ: ಗಣೇಶ ಚತುರ್ಥಿಗೆ ಶುಭ ಕೋರಲು, ಅನುಮತಿಯಿಲ್ಲದೆ ನಗರದ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಕಿದ್ದ ಒಂಬತ್ತು ಫ್ಲೆಕ್ಸ್‌ಗಳನ್ನು ನಗರಸಭೆ ಮಂಗಳವಾರ ತೆರವುಗೊಳಿಸಿದೆ.

‘ಹಬ್ಬಕ್ಕೂ ಮೊದಲೇ ಕೆಲವರು ಫ್ಲೆಕ್ಸ್‌ಗಳನ್ನು ಹಾಕಿದ್ದರು. ಸೋಮವಾರ ಸಂಜೆಯೊಳಗೆ ಅನುಮತಿ ಪಡೆಯಬೇಕೆಂದು ತಿಳಿಸಲಾಗಿತ್ತು. ಆದರೆ, ಅನುಮತಿ ಪಡೆದುಕೊಳ್ಳದ ಕಾರಣ ಒಟ್ಟು ಒಂಬತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ನಾಲ್ಕು ಫ್ಲೆಕ್ಸ್‌ಗಳಿಗೆ ಅನುಮತಿ ಪಡೆದುಕೊಂಡಿದ್ದರಿಂದ ಅವುಗಳನ್ನು ಹಾಗೆಯೇ ಬಿಡಲಾಗಿದೆ’ ಎಂದು ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯ ದಿನಗಳಲ್ಲಿ ನಿತ್ಯ 120ರಿಂದ 125 ಟನ್‌ ಕಸ ನಗರದಲ್ಲಿ ಸಂಗ್ರಹವಾಗುತ್ತದೆ. ಗಣೇಶ ಉತ್ಸವದ ಪ್ರಯುಕ್ತ ಹತ್ತು ಟನ್‌ ಹೆಚ್ಚುವರಿ ತ್ಯಾಜ್ಯ ನಗರದಲ್ಲಿ ಸೋಮವಾರ ಸೃಷ್ಟಿಯಾಗಿತ್ತು. ಮಂಗಳವಾರ ಬೆಳಿಗ್ಗೆ ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)