ಭಾನುವಾರ, ನವೆಂಬರ್ 17, 2019
28 °C

ಮೆಕ್ಕಾ–ಮದೀನಾಗೆ 94 ಜನ ಪಯಣ

Published:
Updated:
Prajavani

ಹೊಸಪೇಟೆ: ಮೆಕ್ಕಾ ಮತ್ತು ಮದೀನಾಗೆ ನಗರದ 94 ಜನ ಸೋಮವಾರ ಪ್ರಯಾಣ ಬೆಳೆಸಿದರು. ಇದು ನಗರದಿಂದ ಪಯಣ ಬೆಳೆಸಿದ 22ನೇ ತಂಡವಾಗಿದೆ. ಎಲ್ಲ ಯಾತ್ರಾರ್ಥಿಗಳಿಗೆ ನಗರದ ಈದ್ಗಾ ಮೈದಾನದ ಬಳಿ ಬೀಳ್ಕೊಡಲಾಯಿತು.

ಅಂಜುಮನ್‌ ಸಮಿತಿಯ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಮುಸ್ಲಿಮರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿ ಪ್ರಾರ್ಥನೆ ಸಲ್ಲಿಸುವಾಗ, ಭಾರತದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿಯಾಗಲೆಂದು ಕೋರಬೇಕು’ ಎಂದು ಮನವಿ ಮಾಡಿದರು. 

ಮುಖಂಡರಾದ ಬಿ. ಮೊಹಮ್ಮದ್‌ ರಿಯಾಜ್‌, ಅಫ್ಸರ್, ಅನ್ಸರ್, ಚಾಂದ್, ವಲಿ, ಫಾರೂಕ್ ಬಾಷಾ ಇದ್ದರು.

ಪ್ರತಿಕ್ರಿಯಿಸಿ (+)