ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಯುಟಿಯುಸಿ ರಾಜ್ಯಮಟ್ಟದ 3ನೇ ಕಾರ್ಮಿಕ ಸಮ್ಮೇಳನ

Last Updated 27 ಜನವರಿ 2020, 9:08 IST
ಅಕ್ಷರ ಗಾತ್ರ

ಬಳ್ಳಾರಿ: ಎಐಯುಟಿಯುಸಿ‌ ರಾಜ್ಯಮಟ್ಟದ 3ನೇ ಕಾರ್ಮಿಕ ಸಮ್ಮೇಳನ ಬೆಂಗಳೂರಿನಲ್ಲಿ ಫೆ. 1 ಮತ್ತು 2ರಂದು ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಸೋಮಶೇಖರ್ ತಿಳಿಸಿದರು.

ಫೆ.13ರಿಂದ 15ರವರೆಗೆ ಜಾರ್ಖಂಡ್‌ನಲ್ಲಿ ನಡೆಯಲಿರುವ ಅಖಿಲ‌ ಭಾರತ ಮಟ್ಟದ ಸಮ್ಮೇಳನದ ಪೂರ್ವಭಾವಿಯಾಗಿ ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿರೂರ್ ಪಾರ್ಕ್ನಲ್ಲಿ ಸಂಘಟನೆಯ ಅಖಿಲ ಭಾರತ ಘಟಕದ ಅಧ್ಯಕ್ಷ ಕೆ.ರಾಧಾಕೃಷ್ಣ ಮುಖ್ಯ ಭಾಷಣ ಮಾಡಲಿದ್ದಾರೆ ಎಸ್ಯುಸಿಐಸಿ ರಾಜ್ಯ ಘಟಕದ‌ ಕಾರ್ಯದರ್ಶಿ ಕೆ.ಉಮಾ ಉಪಸ್ಥಿತರಿರುತ್ತಾರೆ ಎಂದು‌ ನಗರದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಮಿಕರ ಮೇಲೆ‌ ಕೇಂದ್ರ ಮತ್ತು ರಾಜ್ಯ ಸರ್ಕಾರದ ದಬ್ಬಾಳಿಕೆ ಕುರಿತು ಸಮ್ಮೇಳನದಲ್ಲಿ‌ ಚರ್ಚಿಸಲಾಗುವುದು. ಕಾರ್ಮಿಕರ ಸೇವೆ ಕಾಯಂ ಗೊಳಿಸಬೇಕು,ಸಮಾನ‌ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕನಿಷ್ಢ ವೇತನ‌ ನೀತಿಯನ್ನು ಜಾರಿಗೊಳಿಸಬೇಕು, ಅಸಂಘಟಿತ ಕಾರ್ಮಿಕರ ಹಿತರಕ್ಷಣೆ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದರು.

ಆಶಾ, ಅಂಗನವಾಡಿ, ಬಿಸಿಯೂಟ ಯೋಜನೆ ಕಾರ್ಯಕರ್ತೆಯರಿಗೆ ಸರ್ಕಾರಿ ನೌಕರರ ಸ್ಥಾನ ನೀಡಬೇಕು. ಸೇವಾ ಭದ್ರತೆ ನೀಡಬೇಕು. ರಾಜ್ಯದ ಎಲ್ಲ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲಿ ‌ಇಎಸ್ ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು. ನರೇಗ ಅಡಿ ಪ್ರತಿಯೊಬ್ಬರಿಗೂ 150 ದಿನ ಕೆಲಸ ನೀಡಬೇಕು. ಕೇಂದ್ರ ಸರ್ಕಾರದ ಹೊಸ 4 ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸಬೇಕು. ಈಗ ಇರುವ ಕಾರ್ಮಿಕ ಕಾಯ್ದೆ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ನೂರಾರು ಮಂದಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.‌ ಸಂಘಟನೆಯ ಪ್ರತಿನಿಧಿಗಳ ‌ಅಧಿವೇಶನದಲ್ಲಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.ಸಂಘಟನೆಯ ಅಧ್ಯಕ್ಷ‌ ಸೋಮಶೇಖರಗೌಡ, ಉಪಾಧ್ಯಕ್ಷ ಶರ್ಮಾಸ್ , ಕಾರ್ಯದರ್ಶಿ ಎ.ದೇವದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT