ಮಂಗಳವಾರ, ಅಕ್ಟೋಬರ್ 22, 2019
21 °C

ಚದುರಂಗದಲ್ಲಿ ಅಜೇಯ ಚಾಂಪಿಯನ್‌

Published:
Updated:
Prajavani

ಹೊಸಪೇಟೆ: ಇಲ್ಲಿನ ರೇಟೆಡ್‌ ಆಟಗಾರ ಎಸ್‌.ಎಂ. ಅಜೇಯ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ  ಚೆಸ್‌ ಓಪನ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದರು.

ಮೈಸೂರಿನ ಎಂ.ಪಿ. ಅಜಿತ್‌, ಎನ್‌. ತೇಜಸ್ವಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಪಾತ್ರರಾದರು. 

16 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಅನಿರುದ್ಧ ಹುರುಳಿಹಾಲ್‌ (ಪ್ರಥಮ), ಎಸ್‌.ಎ. ಆರ್ಯನ್‌ ಸೂರ್ಯ (ದ್ವಿತೀಯ), ಎಸ್‌. ಸಿದ್ಧಾರ್ಥ (ತೃತೀಯ), 14 ವರ್ಷದೊಳಗಿನವರ ವಿಭಾಗದಲ್ಲಿ ಎಂ.ಎಸ್‌. ಧನುಷ್‌ (ಪ್ರಥಮ),  ಜಿ. ಆನಂದ (ದ್ವಿತೀಯ), ಶ್ರೀಹರಿ ವೆಂಕಟೇಶ ದೇಶಪಾಂಡೆ (ತೃತೀಯ), ಹತ್ತು ವರ್ಷದೊಳಗಿನವರ ಸ್ಪರ್ಧೆಯಲ್ಲಿ ಎಂ.ಎಸ್‌. ದಿಗಂತ (ಪ್ರಥಮ), ಹರಿಪ್ರಿಯಾ ಸಿ. ತಾವರೆ (ದ್ವಿತೀಯ), ಬಿ. ನಯನಾ (ತೃತೀಯ) ಸ್ಥಾನ ಗಳಿಸಿ, ಬಹುಮಾನ ಮುಡಿಗೇರಿಸಿಕೊಂಡರು.

ಸ್ಪರ್ಧೆಯಲ್ಲಿ ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು, ತುಮಕೂರು, ಮಂಗಳೂರು, ಬೀದರ್, ಧಾರವಾಡ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಎಂ. ಬಸವರಾಜ, ನವೀನ್‌ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು.

ಇದಕ್ಕೂ ಮುನ್ನ ಡಿ.ವೈ.ಎಸ್ಪಿ. ವಿ. ರಘುಕುಮಾರ ಉದ್ಘಾಟಿಸಿ, ‘ರಾಜಕ್ರೀಡೆಯಾದ ಚದುರಂಗ ಆಟವು ಬೌದ್ಧಿಕ ಬೆಳವಣಿಗೆಯ ಜೊತೆ ಜೀವನದಲ್ಲಿ ಎದುರಾಗುವ ಕಠಿಣ ಸವಾಲುಗಳನ್ನು ಹೇಗೆ ಸರಳವಾಗಿ ಎದುರಿಸಬಹುದು ಎಂಬುದನ್ನು ಕಲಿಸುತ್ತದೆ’ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಿ.ಎಚ್.ಎಂ.ವಿರುಪಾಕ್ಷಯ್ಯ, ಸಾಯಿಮಣಿ ಪ್ರಕಾಶನದ ಪ್ರಕಾಶಕ ಡಿ.ವೆಂಕಟೇಶ, ಡಾ.ಎಚ್.ಮಲ್ಲಿಕಾರ್ಜುನ, ಆರ್ಬಿಟರ್ ಬಸವರಾಜ್.ಎಂ., ಬಿ.ಪ್ರಕಾಶ ಇದ್ದರು.

ಎಲೈಟ್ ಮತ್ತು ಹಂಪಿ ಚೆಸ್ ಅಕಾಡೆಮಿಗಳು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಟೂರ್ನಮೆಂಟ್‌ ಆಯೋಜಿಸಿದ್ದವು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)