‘ಅಮೆರಿಕ ಸಂವಿಧಾನ’ ಪುಸ್ತಕ ಬಿಡುಗಡೆ

7

‘ಅಮೆರಿಕ ಸಂವಿಧಾನ’ ಪುಸ್ತಕ ಬಿಡುಗಡೆ

Published:
Updated:
Deccan Herald

ಹೊಸಪೇಟೆ: ಪ್ರಾಧ್ಯಾಪಕ ಕಿಚಡಿ ಚನ್ನಪ್ಪ ಅವರು ಕನ್ನಡದಲ್ಲಿ ಬರೆದಿರುವ ‘ಅಮೆರಿಕ ಸಂವಿಧಾನ’ ಮತ್ತು ‘ದಿ ಕಾನ್‌ಸ್ಟಿಟ್ಯೂಶನ್‌ ಆಫ್‌ ಅಮೆರಿಕ’ ಆಂಗ್ಲ ಕೃತಿಗಳ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನಗರದಲ್ಲಿ ನಡೆಯಿತು.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐ.ಎ.ಎಸ್‌. ಪರೀಕ್ಷೆಯಲ್ಲಿ ಪಾಸಾಗಿರುವ ನಗರದ ಕೀರ್ತಿ ಕಿರಣ್‌ ಪೂಜಾರ್‌ ಅವರು ಪುಸ್ತಕ ಬಿಡುಗಡೆಗೊಳಿಸಿ, ‘ದೇಶದ ಸಂವಿಧಾನದ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಅದರಿಂದ ನಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳು ಏನು ಎಂಬುದನ್ನು ಅರಿಯಬಹುದು’ ಎಂದರು.

‘ಅಮೆರಿಕವು ಸಂವಿಧಾನವು ಜಗತ್ತಿನಲ್ಲಿ ಮೊದಲ ಲಿಖಿತ ಸಂವಿಧಅನವಾಗಿದೆ. ಅದು ಇಡೀ ವಿಶ್ವಕ್ಕೆ ಒಂದು ಮಾದರಿ ಸಂವಿಧಾನ ಅನಿಸಿಕೊಂಡಿದೆ. ನಮ್ಮ ದೇಶದ ಸಂವಿಧಾನಕ್ಕೆ 67 ವರ್ಷಗಳು ತುಂಬಿದರೆ, ಅಮೆರಿಕ ಸಂವಿಧಾನ ರಚನೆಯಾಗಿ 200 ವರ್ಷಗಳಾಗಿವೆ’ ಎಂದು ತಿಳಿಸಿದರು.

ಪ್ರಾಧ್ಯಾಪಕ ಎಂ. ಹನುಮಂತಪ್ಪ ಮಾತನಾಡಿ, ‘ಅಮೆರಿಕದ ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ಆ ದೇಶದ ಜನತೆ ನಡೆದುಕೊಳ್ಳುತ್ತಿದ್ದಾರೆ. ಅಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೂ ನಮ್ಮ ದೇಶದಲ್ಲಿರುವ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ’ ಎಂದರು.

‘ಅಮೆರಿಕ ಸಂವಿಧಾನವನ್ನು ಬಹಳ ಸರಳವಾದ ಭಾಷೆಯಲ್ಲಿ ಬರೆಯಲಾಗಿದೆ. ಎಂತಹವರು ಓದಿ ಅರ್ಥ ಮಾಡಿಕೊಳ್ಳಬಹುದು. ನಿಜಕ್ಕೂ ಅದೊಂದು ಆಕರ ಗ್ರಂಥ’ ಎಂದು ತಿಳಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ನಿವೃತ್ತ ಪ್ರಾಧ್ಯಾಪಕ ಕಡ್ಲಬಾಲ ಪನ್ನಂಗಧರ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ರಾಮ, ಭಾರತೀಯ ಜೀವ ವಿಮಾ ನಿಗಮದ ವ್ಯವಸ್ಥಾಪಕ ನಾಣಿಕೇರಿ ಯಂಕಪ್ಪ, ಗಾಯತ್ರಿ ಪ್ರಕಾಶನದ ಕೆ. ಬಸಪ್ಪ, ಪ್ರಾಧ್ಯಾಪಕ ಕಿಚಡಿ ಚನ್ನಪ್, ಕನ್ನಡ ಸಾಹಿತ್ಯ ಪರಿಷತ್ತಿನ ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್ ಇದ್ದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !