ಆನಂದೋತ್ಸವ ಶಿಬಿರ 17 ರಿಂದ

7

ಆನಂದೋತ್ಸವ ಶಿಬಿರ 17 ರಿಂದ

Published:
Updated:

ಬಳ್ಳಾರಿ: ‘ಆರ್ಟ್ ಆಫ್‌ ಲಿವಿಂಗ್ ಸಂಸ್ಥೆಯು ಆ.17ರಿಂದ 19ರವರೆಗೆ ಆನಂದೋತ್ಸವ ಶಿಬಿರವನ್ನು ನಗರದ ಹಾನಗಲ್ ಕುಮಾರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಿದೆ’ ಎಂದು ಸಂಸ್ಥೆಯ ಶಿಕ್ಷಕಿ ಪುಷ್ಪಾ ತಿಳಿಸಿದರು.

‘ರವಿಶಂಕರ ಗುರೂಜಿಯವರ ನೇತೃತ್ವದಲ್ಲಿ ಶಿಬಿರ ದೇಶದಲ್ಲಿ ಏಕಕಾಲಕ್ಕೆ ನಡೆಯಲಿದ್ದು, ಬೆಂಗಳೂರಿನ ಅಂತರರಾಷ್ಟ್ರೀಯ ಆಶ್ರಮದಿಂದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗುವುದು. ಹಲವು ಒತ್ತಡಗಳ ನಡುವೆ ಆನಂದದ ಅನುಭೂತಿಯನ್ನು ಪಡೆಯುವ ವಿಧಾನಗಳ ಕುರಿತು ಹೇಳಿಕೊಡಲಾಗುವುದು ’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ನಕಾರಾತ್ಮಕ ವಿಚಾರಗಳನ್ನು ಹೋಗಲಾಡಿಸಲು ವೈಜ್ಞಾನಿಕ ಉಸಿರಾಟದ ಪದ್ಧತಿಗಳನ್ನು ತಿಳಿಸಿಕೊಡಲಾಗುವುದು. ಈಗಾಗಲೇ 400 ಮಂದಿ ಹೆಸರು ನೋಂದಾಯಿಸಿದ್ದಾರೆ’ ಎಂದರು.

ವೈದ್ಯ ಮಾಣಿಕ್ ರಾವ್, ‘ಪ್ರತಿ ಒಬ್ಬರಿಗೆ ₨ 1,ಸಾವಿರ ಪ್ರವೇಶ ಶುಲ್ಕ ನಿಗದಿಗೊಳಿಸಿದ್ದು, ಸಂಗ್ರಹವಾದ ನಗದನ್ನು ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು’ ಎಂದರು.

‘ಆ.17 ಮತ್ತು 18 ರಂದು ಸಂಜೆ 5.45ರಿಂದ ರಾತ್ರಿ 8.30ರವರೆಗೆ ಹಾಗೂ 19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ’ ಎಂದರು. ತೆರಿಗೆ ಸಲಹೆಗಾರ ಭರತ್, ಹಾಗೂ ಶೈಲಜಾ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !