ಸಂಭ್ರಮದ ಆಂಜನೇಯ ಸ್ವಾಮಿ ರಥೋತ್ಸವ

ಮಂಗಳವಾರ, ಏಪ್ರಿಲ್ 23, 2019
32 °C

ಸಂಭ್ರಮದ ಆಂಜನೇಯ ಸ್ವಾಮಿ ರಥೋತ್ಸವ

Published:
Updated:
Prajavani

ಹೊಸಪೇಟೆ: ಆಂಜನೇಯ ಸ್ವಾಮಿ ರಥೋತ್ಸವ ಇಲ್ಲಿನ ಚಿತ್ತವಾಡ್ಗಿಯಲ್ಲಿ ಶುಕ್ರವಾರ ಸಂಜೆ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಜರುಗಿತು.

ಪಾದುಗಟ್ಟೆ ಬಸವಣ್ಣ ಗುಡಿಯಿಂದ ಕಲ್ಮಠೇಶ್ವರ ದೇವಸ್ಥಾನದ ವರೆಗೆ ಭಕ್ತರು ತೇರು ಎಳೆದರು. ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತರು ಹರಕೆ ತೀರಿಸಿದರು. ಕಟ್ಟಡಗಳ ಮೇಲೆ ನಿಂತು ಜನ ತೇರು ಎಳೆಯುವುದನ್ನು ಕಣ್ತುಂಬಿಕೊಂಡರು.

ಇದಕ್ಕೂ ಮುನ್ನ ಪಟ ಹರಾಜು ನಡೆಯಿತು. ಎಚ್.ಕೆ. ಅಡಿಗಿ ಶ್ರೀಧರ ಅವರು ₹38 ಸಾವಿರಕ್ಕೆ ಪಟ ತನ್ನದಾಗಿಸಿಕೊಂಡರು. ಚಿತ್ತವಾಡ್ಗಿ, ಹೊಸೂರು, ಎರೆಬೈಲು, ಕರೆಕಲ್ ಮಾಗಾಣಿ, ಇಪ್ಪಿತೇರಿ ಸೇರಿದಂತೆ ವಿವಿಧ ಭಾಗದ ಜನ ಬಂದು, ದೇವರ ದರ್ಶನ ಪಡೆದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !