ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಪಿ ಇತಿಹಾಸದ ನಿಜ ಚಿತ್ರಣ’

ದೇವಾಲಯಗಳ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ ಕಾರ್ಯಾಗಾರಕ್ಕೆ ತೆರೆ
Last Updated 7 ಸೆಪ್ಟೆಂಬರ್ 2022, 16:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ವಿಜಯನಗರ ಕಾಲದ ದೇವಾಲಯಗಳ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ’ ಕುರಿತು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಬುಧವಾರ ತೆರೆ ಬಿತ್ತು.

ಸಮಾರೋಪದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಪ್ರಾಧ್ಯಾಪಕ ಜಿ. ಕರಿಯಪ್ಪ, ಹಂಪಿ ಪ್ರವಾಸಿ ತಾಣವಲ್ಲ. ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ಚರಿತ್ರೆಯ ಘಟನೆ, ಅಂದಿನ ಜೀವನ ಶೈಲಿ, ಅವಶೇಷಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಸ್ಥಳ. ಇತಿಹಾಸದ ನೈಜ ಚಿತ್ರಣದ ಪ್ರತೀಕವಾಗಿದೆ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸಂಶೋಧನಾ ಕೇಂದ್ರದ ನಿರ್ದೇಶಕ ಸಿ.ಎಸ್.ವಾಸುದೇವನ್ ಮಾತನಾಡಿ, ವಸ್ತು ಸಂಗ್ರಹಾಲಯ ಹಾಗೂ ಪ್ರವಾಸೋದ್ಯಮ ಮತ್ತು ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗಗಳು ಅವಳಿ-ಜವಳಿ ಇದ್ದಂತೆ. ಇದರ ಅಧ್ಯಯನಕ್ಕೆ ಸಂಯಮ ಅಗತ್ಯ ಎಂದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಮುಖ್ಯಸ್ಥ ಕೆ.ಪ್ರಭು, ಕ್ಯೂರೇಟರ್‌ ಶಶಿಕುಮಾರ್, ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಮುಖ್ಯಸ್ಥ ಎಸ್.ವೈ. ಸೋಮಶೇಖರ್ ಇದ್ದರು.

ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಕನ್ನಡ ವಿಶ್ವವಿದ್ಯಾಲಯದ ಲಲಿತ ಕಲೆಗಳ ನಿಕಾಯದ ಡೀನ್‌ ರವೀಂದ್ರನಾಥ ಮಾತನಾಡಿ, ಹಂಪಿ ಜಾಗತೀಕವಾಗಿ ಪ್ರಸಿದ್ಧವಾಗಿದೆ. ಹಂಪಿಯ ಪ್ರತಿಮಾಶಾಸ್ತ್ರ ಬಹು ಅಪರೂಪದ್ದು. ಹಂಪಿಯ ಶಿಲ್ಪಗಳಲ್ಲಿ ಉಬ್ಬುಶಿಲ್ಪಗಳು, ದುಂಡು ಶಿಲ್ಪಗಳು ಮತ್ತು ತಗ್ಗುಶಿಲ್ಪಗಳಂಥಹ ವೈವಿಧ್ಯಮಯ ಶಿಲ್ಪಗಳನ್ನು ಕಾಣಬಹುದು ಎಂದರು.
ಮೈಸೂರಿನ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಆರ್. ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT