ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಪಿ ಉತ್ಸವ' : 30ಕ್ಕೆ ಧ್ವನಿ, ಬೆಳಕಿಗೆ ಕಲಾವಿದರ ಆಯ್ಕೆ

Last Updated 26 ಡಿಸೆಂಬರ್ 2019, 14:18 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ನಡೆಯಲಿರುವ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ 100 ಜನ ಕಲಾವಿದರ ಆಯ್ಕೆ ಪ್ರಕ್ರಿಯೆ ಡಿ. 30ರಂದು ಬೆಳಿಗ್ಗೆ 10.30ರಿಂದ ನಗರದ ಸಂಡೂರು ರಸ್ತೆ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಭರತನಾಟ್ಯ ಕಲಾವಿದರು, ಬಾಲ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಆಸಕ್ತರು ಎರಡು ಸ್ಟ್ಯಾಂಪ್‌ ಸೈಜ್‌ ಭಾವಚಿತ್ರ, ಆಧಾರ್‌ ಕಾರ್ಡ್‌ ಅಥವಾ ಮತದಾರರ ಗುರುತಿನ ಚೀಟಿಯೊಂದಿಗೆ, ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಕಲಾವಿದರ ಆಯ್ಕೆಯು ಆಯ್ಕೆ ಸಮಿತಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.

‘ಆಯ್ಕೆಯಾದವರಿಗೆ ಏಳು ದಿನಗಳ ಪೂರ್ವ ಸಿದ್ಧತಾ ತರಬೇತಿ, ಏಳು ದಿನಗಳ ಪ್ರದರ್ಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾಗುತ್ತದೆ. ಕಾರ್ಯಕ್ರಮವು ಜ. 10ರಿಂದ 16ರ ವರೆಗೆ ಹಂಪಿಯ ಆನೆಸಾಲು ಮಂಟಪದ ಎದುರು ನಡೆಯಲಿದೆ. ಈಗಾಗಲೇ ವೇದಿಕೆ ನಿರ್ಮಾಣ, ವಿದ್ಯುದ್ದೀಪಗಳ ಅಳವಡಿಕೆ ಕೆಲಸ ಭರದಿಂದ ನಡೆದಿದೆ’ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌ ತಿಳಿಸಿದ್ದಾರೆ.

ಸಂಗೀತ ಮತ್ತು ನಾಟಕ ವಿಭಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT