ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಯವೈಶ್ಯರು ಶಿಕ್ಷಣಕ್ಕೂ ಒತ್ತು ಕೊಡಿ’

Last Updated 20 ಅಕ್ಟೋಬರ್ 2019, 14:31 IST
ಅಕ್ಷರ ಗಾತ್ರ

ಹೊಸಪೇಟೆ: ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘದಿಂದ ಭಾನುವಾರ ನಗರದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪ್ರದಾನ ಮಾಡಲಾಯಿತು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 85ಕ್ಕಿಂತ ಅಧಿಕ ಅಂಕ ಗಳಿಸಿದ ಸಮಾಜದ 38 ವಿದ್ಯಾರ್ಥಿಗಳು, 57 ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ 30 ಹಾಸ್ಟೆಲ್‌ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಮತ್ತು ನಿರ್ವಹಣೆ ಸಂಸ್ಥೆ ನಿರ್ದೇಶಕ ಬಿ.ಎಸ್‌. ರಘುವೀರ್‌ ವಿತರಿಸಿದರು.

ಬಳಿಕ ಮಾತನಾಡಿ, ‘ಆರ್ಯವೈಶ್ಯ ಸಮಾಜದ ಹೆಚ್ಚಿನವರು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜತೆಗೆ ಹೊಸ ತಲೆಮಾರಿನ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಅಲಂಕರಿಸಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಆರ್ಯವೈಶ್ಯ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಈರೇಶ್‌ ಇಲ್ಲೂರ್‌, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಶಿ,ನಗರಸಭೆ ಕಂದಾಯ ಅಧಿಕಾರಿ ಸುಬ್ರಮಣ್ಯ ಶೆಟ್ಟಿ, ನಿವೃತ್ತ ಪ್ರಾಚಾರ್ಯ ಎನ್. ಸತ್ಯಮೂರ್ತಿ, ದಕ್ಷಿಣ ರೈಲ್ವೆ ಗಂಗಾವತಿ ನಿಲ್ದಾಣದ ಸಹಾಯಕ ಕಾರ್ಯನಿರ್ವಾಹಕ ಉಮಾ ಮಹೇಶ್‌, ಪ್ರಾಧ್ಯಾಪಕ ತಿಪ್ಪೇಸ್ವಾಮಿ ಶ್ರೇಷ್ಠಿ, ಕುಮಾರಸ್ವಾಮಿ ಶೆಟ್ಟಿ, ಅನಂತಯ್ಯ ಚೌದ್ರಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಸೂರಿಶೆಟ್ಟಿ ಸಂಜೀವಪ್ಪ ಶೆಟ್ಟಿ, ರಮೇಶ್ ಗುಪ್ತಾ, ಕೆ. ರಾಜೇಂದ್ರ, ಪ್ರೇಮಾ, ಸುವರ್ಣ, ವಿಜಯಲಕ್ಷ್ಮಿ, ಕಟ್ಟಾನಂಜಪ್ಪ, ಬಿ. ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT