ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರಿಂದ ಪ್ರತಿಭಟನೆ

Last Updated 17 ಜೂನ್ 2019, 12:07 IST
ಅಕ್ಷರ ಗಾತ್ರ

ಹೊಸಪೇಟೆ: ಆಟೊ ಗ್ಯಾಸ್‌ಗೆ ಹೆಚ್ಚಿನ ಹಣ ಪಡೆಯುತ್ತಿರುವುದು ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯನಗರ ಆಟೊ ಚಾಲಕರ ಸಂಘದವರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ’ಒಂದು ಲೀಟರ್‌ ಆಟೊ ಗ್ಯಾಸ್‌ಗೆ ಬಳ್ಳಾರಿಗಿಂತ ₹4 ಹೆಚ್ಚಿಗೆ ಪಡೆಯಲಾಗುತ್ತಿದೆ. ಇದರಿಂದ ಆಟೊ ಚಾಲಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಒಂದೇ ಜಿಲ್ಲೆಯಲ್ಲಿ ಎರಡೂ ಕಡೆಗಳಲ್ಲಿ ಬೇರೆ ಬೇರೆ ದರವಿರಲು ಹೇಗೆ ಸಾಧ್ಯ. ಅದಕ್ಕೆ ಕಡಿವಾಣ ಹಾಕಬೇಕು‘ ಎಂದು ಒತ್ತಾಯಿಸಿದರು.

’ಸದ್ಯ ನಗರದಲ್ಲಿ ಆಟೊ ಗ್ಯಾಸ್‌ ಬಂಕ್‌ಗಳಿದ್ದು, ಇನ್ನೆರಡು ಬಂಕ್‌ ನಿರ್ಮಿಸಬೇಕು. 24 ಗಂಟೆ ಕಾಲ ಅವುಗಳು ಕೆಲಸ ನಿರ್ವಹಿಸುವಂತೆ ಮಾಡಬೇಕು. ನಗರದಲ್ಲಿನ ಎಲ್ಲ ಆಟೊ ನಿಲ್ದಾಣಗಳನ್ನು ಆಧುನೀಕರಣಗೊಳಿಸಬೇಕು. ಆಟೊ ಚಾಲಕರಿಗೆ ನಿವೇಶನ ಕೊಡಬೇಕು‘ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಸಿ. ಕೃಷ್ಣ, ಪ್ರಧಾನ ಕಾರ್ಯದರ್ಶಿ ವೈ. ರಾಮಚಂದ್ರಬಾಬು ಹಾಗೂ ಆಟೊ ಚಾಲಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT