ಕೊಚ್ಚಿ ಹೋದವರ ಶೋಧಕ್ಕೆ ಕಾಲುವೆ ನೀರು ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

7

ಕೊಚ್ಚಿ ಹೋದವರ ಶೋಧಕ್ಕೆ ಕಾಲುವೆ ನೀರು ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಮೇಲ್ಮಟ್ಟದ ಕಾಲುವೆಯಲ್ಲಿ (ಎಚ್‌.ಎಲ್‌.ಸಿ.) ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಆಟೊ ಫೆಡರೇಶನ್‌ ಕಾರ್ಯಕರ್ತರು ಶುಕ್ರವಾರ ನಗರದ ತುಂಗಭದ್ರಾ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ನಗರದ ಸಂಡೂರು ರಸ್ತೆಯಲ್ಲಿರುವ ಎಚ್‌.ಎಲ್‌.ಸಿ.ಯಲ್ಲಿ ಗುರುವಾರ ಆಟೊ ಉರುಳಿ ಕೊಚ್ಚಿಕೊಂಡು ಹೋಗಿದೆ. ಚಾಲಕ ಸೇರಿದಂತೆ ಅದರಲ್ಲಿದ್ದ ಪ್ರಯಾಣಿಕರ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿಲ್ಲ. 20 ಅಡಿ ಆಳವಿರುವ ಕಾಲುವೆಯಲ್ಲಿ ನೀರು ಹರಿಸುವುದು ಸ್ಥಗಿತಗೊಳಿಸಿದರೆ ಹುಡುಕಾಟಕ್ಕೆ ಸಹಾಯವಾಗುತ್ತದೆ’ ಎಂದು ಫೆಡರೇಶನ್‌ ರಾಜ್ಯ ಕಾರ್ಯದರ್ಶಿ ಕೆ.ಎಂ. ಸಂತೋಷ್‌ ಕುಮಾರ್‌ ಹೇಳಿದರು.

ಫೆಡರೇಶನ್‌ನ ರುದ್ರಪ್ಪ, ಹುಲುಗಪ್ಪ, ಗುಜ್ಜಲ್‌, ಹನುಮಾ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !