ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾಳುಗಳಿಗೆ 'ಸಾಧನಾ ಮಾರ್ಗ' ನಾಳೆ

Last Updated 12 ಮಾರ್ಚ್ 2020, 6:59 IST
ಅಕ್ಷರ ಗಾತ್ರ

ಬಳ್ಳಾರಿ: ಕೆ.ಎ.ಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿರುವ ಕಡುಬಡವರಿಗೆ ಸ್ಪರ್ಧಾ ಬೆಳಕು (ಇಂಡಿಯನ್ ಇನ್ಟಿಟ್ಯೂಟ್ ಫಾರ್ ಸಿವಿಲ್ ಸರ್ವೀಸಸ್) ವತಿಯಿಂದ ಸನ್ಮಾನ ಮತ್ತು ಸಾಧಕರಿಂದ 'ಸಾಧನಾ ಮಾರ್ಗ' ಕಾರ್ಯಕ್ರಮವನ್ನು ಮಾರ್ಚ್ 14ರಂದು ಬೆಳಿಗ್ಗೆ 10.30ಕ್ಕೆ ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಜೆ.ಮಂಜುನಾಥ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದವರಿಗೆ ಸನ್ಮಾನ ಮಾಡುವ ಮೂಲಕ ಇತರರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಪರೀಕ್ಷೆಗಳ ಕುರಿತು ಪದವಿ ವಿದ್ಯಾರ್ಥಿಗಳಲ್ಲಿ, ಪದವೀಧರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಯಾಗಾರದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದೆ. 4 ಮಂದಿ ಕೆ.ಎ.ಎಸ್ ಹಾಗೂ 3 ಮಂದಿ ವಿವಿಧ ಸರ್ಕಾರಿ ಹುದ್ದೆಗಳನ್ನು ಗಿಟ್ಟೊಸಿಕೊಂಡಿರುವ ಸಾಧಕರನ್ನು ಆಹ್ವಾನಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿರುವ ಪ್ರಮುಖ ತರಬೇತಿ ಸಂಸ್ಥೆಗಳ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ.

2017ರಲ್ಲಿ ಕೆಎಎಸ್ ಪಾಸು ಮಾಡಿರುವ ಮಹೇಶ ಪಾಟೀಲ್, ಸುನೀಲ್ ಪವಾರ, ಲೋಕೇಶ, ಸುನೀಲ ಕುಮಾರ ಹಾಗೂ ಸಿರುಗುಪ್ಪದ ನಾಗರಾಜ ತರಬೇತಿ ನೀಡುವರು ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಉಪನ್ಯಾಸಕ ರುದ್ರೇಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT