ಪೌರಕಾರ್ಮಿಕರ ದಿಢೀರ್ ಪ್ರತಿಭಟನೆ

7

ಪೌರಕಾರ್ಮಿಕರ ದಿಢೀರ್ ಪ್ರತಿಭಟನೆ

Published:
Updated:

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಇಂದು ಬೆಳ್ಳಂಬೆಳಿಗ್ಗೆ ನೂರಾರು ಪೌರಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು. 
ಮೂರು ತಿಂಗಳಕಾಲ ವೇತನ ನೀಡಿಲ್ಲ ಎಂದು ನೂರಾರು ಮಹಿಳಾ ಪೌರಕಾರ್ಮಿಕರು ಬೆಳಗಿನ ಜಾವದ ಕೆಲಸ, ಕಾರ್ಯವನ್ನು ಬಹಿಷ್ಕರಿಸಿ, ಪಾಲಿಕೆ ಎದುರೇ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಪಡೆದ ಪಾಲಿಕೆ ಆಯುಕ್ತ ಬಿ.ನಾರಾಯಣಪ್ಪ, ಮೇಯರ್ ಸುಶೀಲಾಬಾಯಿ, ಮಾಜಿ ಮೇಯರ್ ಜಿ.ವೆಂಕಟರಮಣ ಸ್ಥಳಕ್ಕಾಗಮಿಸಿದರು.

ಕೆಲಕಾಲ ಆಯುಕ್ತರೊಂದಿಗೆ ಮಹಿಳಾ ಪೌರಕಾರ್ಮಿಕರು ಮಾತಿನ ಚಕಮಕಿ ನಡೆಸಿದರು.

ರೆಡ್ಡಿ ಭೇಟಿ: ಕೆಲ ಸಮಯದಲ್ಲಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರೂ, ಪ್ರಯೋಜನ ಆಗಲಿಲ್ಲ. ನಂತರ ಮುಖಂಡರೊಂದಿಗೆ ಸಭೆ ಆರಂಭವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !