ಕರಡಿ ದಾಳಿ ವ್ಯಕ್ತಿ ಗಾಯ

7

ಕರಡಿ ದಾಳಿ ವ್ಯಕ್ತಿ ಗಾಯ

Published:
Updated:
27ಕೆಡಿಎಲ್2: ಕರಡಿ ದಾಳಿಯಲ್ಲಿ ಗಾಯಗೊಂಡ ಕೂಡ್ಲಿಗಿ ತಾಲ್ಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ ದುರುಗಪ್ಪ.

ಕೂಡ್ಲಿಗಿ: ತಾಲ್ಲೂಕಿನ ಓಬಳಶೆಟ್ಟಿಹಳ್ಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೊರಟಿದ್ದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿದೆ.

ದುರುಗಪ್ಪ ಗಾಯಗೊಂಡ ವ್ಯಕ್ತಿ. ದುರುಗಪ್ಪ ಬುಧವಾರ ಬೆಳಿಗ್ಗೆ ಕೆಲಸ ಮಾಡಲು ಗುಂಡುಮುಣುಗು ಗ್ರಾಮದತ್ತ ಹೋಗುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ದಾಳಿಯಿಂದ ಆತಂಕಗೊಂಡ ದುರುಗಪ್ಪ ಕೂಗಿಕೊಂಡಿದ್ದು, ಸಮೀಪ ಇದ್ದವರು ರಕ್ಷಣೆಗಾಗಿ ಧಾವಿಸಿದ್ದಾರೆ.

ಕರಡಿ ದಾಳಿಯಿಂದ ಅವರ ತೊಡೆ, ಹೊಟ್ಟೆ ಭಾಗದಲ್ಲಿ ಗಾಯವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಬಂದ ಆರಣ್ಯಧಿಕಾರಿಗಳು ಎರಡು ಕರಡಿಗಳನ್ನು ಅರಣ್ಯದತ್ತ ಓಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !