ಕೂಡ್ಲಿಗಿ: ಕರಡಿ ದಾಳಿ, ವ್ಯಕ್ತಿಗೆ ತೀವ್ರ ಗಾಯ

ಗುರುವಾರ , ಜೂನ್ 27, 2019
30 °C

ಕೂಡ್ಲಿಗಿ: ಕರಡಿ ದಾಳಿ, ವ್ಯಕ್ತಿಗೆ ತೀವ್ರ ಗಾಯ

Published:
Updated:

ಕೂಡ್ಲಿಗಿ: ತಾಲ್ಲೂಕಿನ ನರಸಿಂಹಗಿರಿ ಗ್ರಾಮದ ಹರೀಶ್ ಎಂಬ ವ್ಯಕ್ತಿಯ ಮೇಲೆ ಭಾನುವಾರ ರಾತ್ರಿ ಕರಡಿ ದಾಳಿ ಮಾಡಿ ತೀವ್ರ ಗಾಯಗೊಳಿಸಿದೆ.

ಹರೀಶ್ ರಾತ್ರಿ ಊಟ ಮಾಡಿ ಗ್ರಾಮದ ಹೊರವಲದ ದೇವಸ್ಥಾನದ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕತ್ತಲಲ್ಲಿ ನಾಲ್ಕು ಕರಡಿಗಳಿದ್ದು, ಅದರಲ್ಲಿ ಒಂದು ಕರಡಿ ಏಕಾ ಏಕಿ ಹರೀಶ್ ಮೇಲೆ ದಾಳಿ ಮಾಡಿದೆ.

ದಾಳಿಯಿಂದ ಬೆಚ್ಚಿದ ಹರೀಶ್ ಕೂಗಿಕೊಂಡಾಗ ಅಕ್ಕ ಪಕ್ಕದಲ್ಲಿದ್ದ ಜನರು ಸ್ಥಳಕ್ಕೆ ಬಂದಾಗ ಕರಡಿ ಅಲ್ಲಿಂದ ಪರಾರಿಯಾಗಿದೆ. ನಂತರ ಹರೀಶನನ್ನು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳಿಸಲಾಗಿದೆ.

ಸಿಡಿಲು ಬಡಿದು ಇಬ್ಬರು ಸಾವು
ದಾವಣಗೆರೆ:
ಜಿಲ್ಲೆಯ ಚಿಗಟೇರಿ ಗ್ರಾಮದಲ್ಲಿ ಸೋಮವಾರ ಬೆಳ್ಳಿಗೆ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಅರವಿಂದ್, ಕಿರಣ ಎಂಬ ಯುವಕರು ಸಾವನ್ನಪ್ಪಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !