ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಕ್ಕಾಗಿ ಸುಕೋ ಬ್ಯಾಂಕ್ ಮುಂದೆ ನೆರೆದ ಜನ

Last Updated 2 ಏಪ್ರಿಲ್ 2020, 3:52 IST
ಅಕ್ಷರ ಗಾತ್ರ

ಬಳ್ಳಾರಿ: ಕಡಿಮೆ ಬಡ್ಡಿ ದರದಲ್ಲಿ‌ ₹ 10 ಸಾವಿರ ಸಾಲ ನೀಡಲಾಗುತ್ತದೆ ಎಂಬ ಪ್ರಕಟಣೆ ಮೇರೆಗೆ ನಗರದ ಗೌತಮ ನಗರದ ನಿವಾಸಿಗಳು ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದಲ್ಲಿರುವ ಸುಕೋ ಬ್ಯಾಂಕ್ ಮುಂಭಾಗ ಗುರುವಾರ ಬೆಳಿಗ್ಗೆಯೇ ನೆರೆದಿದ್ದರು.

ಏಕಾಏಕಿ ಗುಂಪು ಸೇರಿದ ಜನರನ್ನು ವಾಪಸ್ ಕಳಿಸಲು ಪೊಲೀಸರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

'ಬ್ಯಾಂಕ್ ತೆರೆಯುವವರೆಗೂ ನಾವು ಇಲ್ಲೇ ಇರುತ್ತೇವೆ. ವ್ಯವಸ್ಥಾಪಕರು ಬರುವವರೆಗೂ ಹೋಗುವುದಿಲ್ಲ‌' ಎಂದು ಜನ ಪಟ್ಟುಹಿಡಿದು ನಿಂತರು.

'ಗುಂಪು ಸೇರಿದರೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯ ಬೇಕಾಗುತ್ತದೆ' ಎಂದು ಪೊಲೀಸರು ಎಚ್ಚರಿಕೆ‌ ನೀಡಿದ ಜನ ಚದುರಿದರು.

ಅಸಮಾಧಾ‌ನ:‌'ಸಾಲ ಕೊಡುತ್ತೇವೆ ಎಂದಿದ್ದಕ್ಕೆ ಬಂದಿದ್ದೇವೆ. ಈಗ ನೋಡಿದರೆ ಲಾಕ್ ಡೌನ್ ಮುಗಿವವರೆಗೂ ಕೊಡುವುದಿಲ್ಲ‌ ಎನ್ನುತ್ತಿದ್ದಾರೆ. ಅಲ್ಲಿವರೆಗೂ ಬಡವರು ಹೇಗೆ ಬದುಕಬೇಕು' ಎಂದು ಗೌತಮನಗರದ ಹೊನ್ನೂರು‌ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶರಾವ್, ಲಾಕ್ ಡೌನ್ ಅವಧಿ ಮುಗಿದ ಬಳಿಕ ಅರ್ಜಿದಾರ ದಾಖಲೆ, ವಾಸಸ್ಥಳ ಪರಿಶೀಲನೆ ನಡೆಸಿ ಸಾಲ ವಿತರಿಸಲಾಗುವುದು. ಅಲ್ಲಿವರೆಗು ತಾಳ್ಮೆಯಿಂದ ಕಾಯಲೇಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT