ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ: ಮತದಾನಕ್ಕಾಗಿ ಬೆಂಗಳೂರಿನಿಂದ ಬಂದ ಗರ್ಭಿಣಿ

Last Updated 23 ಏಪ್ರಿಲ್ 2019, 5:41 IST
ಅಕ್ಷರ ಗಾತ್ರ

ಕೂಡ್ಲಿಗಿ: ತುಂಬು ಗರ್ಭಿಣಿಯೊಬ್ಬರು ಬೆಂಗಳೂರಿನಿಂದ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಟ್ಟಣದ 1ನೇ ವಾರ್ಡ್ ನಿವಾಸಿ ಅಪೂರ್ವ ಹಿರೇಮಠ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 34ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಉಪನ್ಯಾಸಕ ಸಿದ್ದರಾಮ ಹಿರೇಮಠ ಹಾಗೂ ವಿದ್ಯಾ ಅವರ ಪುತ್ರಿಯಾದ ಅಪೂರ್ವ ಹಿರೇಮಠ, ಸದ್ಯ ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಧಾರವಾಡದ ಸಾಗರ ಹಿರೇಮಠರೊಂದಿಗೆ ವಿವಾಹವಾಗುತ್ತು. ‘ವಿದ್ಯಾಭ್ಯಾಸದ ಮಧ್ಯೆ ಒಂದೆರಡು ಚುನಾವಣೆಗಳಲ್ಲಿ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ನನ್ನ ಹಕ್ಕಿನಿಂದ ವಂಚಿತರಾಗದೇ ಮತ ಚಲಾಯಿಸಬೇಕು’ ಎಂಬ ಸಂಕಲ್ಪದೊಂದಿಗೆ ಮತದಾನ ಮಾಡಿದ್ದಾರೆ.

ನನ್ನ ಮನದಾಸೆಯನ್ನು ಪತಿ ಹಾಗೂ ತಂದೆ ಬಳಿ ಹೇಳಿಕೊಂಡಿದ್ದೆ. ನಮ್ಮ ತಂದೆ ನನ್ನನ್ನು ಬೆಂಗಳೂರಿನಿಂದ ಕಾರಿನಲ್ಲಿ ಕರೆದುಕೊಂದು ಬಂದಿದ್ದರು. ತಂದೆ ಚುನಾವಣಾ ಕರ್ತವ್ಯಕ್ಕೆ ಹೋಗಿದ್ದರಿಂದ ನಾನು ತಾಯಿಯೊಂದಿಗೆ ಬಂದು ಮತ ಚಲಾವಣೆ ಮಾಡಿದ್ದೇನೆ ಎಂದು ಅಪೂರ್ವ ‘ಪ್ರಜಾವಾಣಿ’ಯೊಂದಿಗೆ ಸಂತೋಷ ಹಂಚಿಕೊಂಡರು.

ಅಪೂರ್ವ, ಪತಿ ಸಾಗರ ಹಿರೇಮಠ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಧಾರವಾಡಕ್ಕೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT