ಗುರುವಾರ , ಡಿಸೆಂಬರ್ 12, 2019
26 °C

ಬಳ್ಳಾರಿ: ಬಿಐಟಿಎಂ ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬಾಲಕರ ಹಾಸ್ಟೆಲ್‌ನಲ್ಲಿ ಬೆಳಗ್ಗೆ ಇಡ್ಲಿ ಮತ್ತು ಮಧ್ಯಾಹ್ನ ಊಟ  ಸೇವಿಸಿದ ಬಿಐಟಿಎಂ ಕಾಲೇಜಿನ ಸುಮಾರು ಅರವತ್ತು ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ, ಬೇಧಿಯಿಂದಾಗಿ ಅಸ್ವಸ್ಥಗೊಂಡು ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ‌ ಚಿಕಿತ್ಸೆ ಪಡೆದರು.

ಕಾಲೇಜಿನಲ್ಲಿ ಗುರುವಾರ ಪ್ರಯೋಗಾಲಯ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ.

ವಾರ್ಡನ್ ರಾಜಶೇಖರ್ ಅವರು ಬಸ್ ವ್ಯವಸ್ಥೆ ಮಾಡಿಸಿ ಆಸ್ಪತ್ರೆಗೆ ಕರೆತಂದರು ಎಂದು ವಿದ್ಯಾರ್ಥಿ ಆಕಾಶ್‌ ಪ್ರಜಾವಾಣಿಗೆ ತಿಳಿಸಿದರು.

60 ವಿದ್ಯಾರ್ಥಿಗಳು ಹೊರರೋಗಿ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂವರನ್ನು ದಾಖಲಿಸಿಕೊಳ್ಳಲಾಗಿದೆ  ಎಂದು ವಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಮರಿರಾಜನ್ ತಿಳಿಸಿದರು‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು