ಪ್ರಚಾರದ ನಡುವೆ ಕ್ರಿಕೆಟ್‌ ಆಡಿದ ದೇವೇಂದ್ರಪ್ಪ!

ಸೋಮವಾರ, ಏಪ್ರಿಲ್ 22, 2019
33 °C

ಪ್ರಚಾರದ ನಡುವೆ ಕ್ರಿಕೆಟ್‌ ಆಡಿದ ದೇವೇಂದ್ರಪ್ಪ!

Published:
Updated:
Prajavani

ಬಳ್ಳಾರಿ: ನಗರದಲ್ಲಿ ಶುಕ್ರವಾರ ಬಿಸಲೇರುವ ಮುನ್ನ ಮುನ್ಸಿಪಲ್‌ ಕಾಲೇಜು ಮೈದಾನಕ್ಕೆ ಬಂದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಚುನಾವಣೆ ಪ್ರಚಾರದ ನಡುವೆ ಕೆಲ ನಿಮಿಷ ಕ್ರಿಕೆಟ್‌ ಆಡಿ ಸಂಭ್ರಮಿಸಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ ಅವರೂ ಅವರೊಂದಿಗೆ ಆಡಿದ್ದು ವಿಶೇಷವಾಗಿತ್ತು.

ಈ ಇಬ್ಬರೂ, ನಗರದ ಬಿಡಿಎಎ ಫುಟ್‌ಬಾಲ್‌ ಮೈದಾನ, ವಿಮ್ಸ್‌ ಮೈದಾನ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನಂತರ, ಅಲ್ಲಿಪುರದ ಮಹದೇವ ತಾತನವರ ಮಠ, ಕಲ್ಯಾಣಸ್ವಾಮಿ ಮಠ, ಬಾಲಾಂಜನೇಯ ಸ್ವಾಮಿ ದೇವಸ್ಥಾನ, ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಕೀಲರ ಸಂಘದ ಮುಖಂಡರನ್ನೂ ಭೇಟಿ ಮಾಡಿ ಮತ ಯಾಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !