ಬುಧವಾರ, ನವೆಂಬರ್ 13, 2019
23 °C

‘ಕೆಲಸ ಗುರುತಿಸಿ ಪಕ್ಷದಲ್ಲಿ ಜವಾಬ್ದಾರಿ’

Published:
Updated:
Prajavani

ಹೊಸಪೇಟೆ: ಜಿಲ್ಲಾ ಬಿಜೆಪಿ ಸಾಂಸ್ಥಿಕ ಚುನಾವಣೆ ಸಭೆ ಗುರುವಾರ ಸಂಜೆ ನಗರದಲ್ಲಿ ನಡೆಯಿತು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ‘ಪಕ್ಷದ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ನವೆಂಬರ್‌–ಡಿಸೆಂಬರ್‌ ಒಳಗೆ ವಾರ್ಡ್‌, ಬೂತ್‌, ಮಂಡಲ, ಜಿಲ್ಲಾ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕೊನೆಯ ಹಂತದಲ್ಲಿದೆ’ ಎಂದರು.

‘ಹೊಸದಾಗಿ ಯಾರೇ ಪಕ್ಷದ ಅಧಿಕಾರ ವಹಿಸಿಕೊಳ್ಳಲಿ ಅವರಿಗೆ ಎಲ್ಲರೂ ಸಹಕಾರ ಕೊಡಬೇಕು. ಯಾರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಅಂತಹವರನ್ನು ಪಕ್ಷ ಗುರುತಿಸುತ್ತಿದೆ. ಅದಕ್ಕೆ ತಾಜಾ ನಿದರ್ಶನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಗುರುಲಿಂಗನಗೌಡ, ಎ.ತಿಮ್ಮಾರೆಡ್ಡಿ, ರಾಮಲಿಂಗಪ್ಪ, ಮುರಾರಿಗೌಡ, ಪೂಜಪ್ಪ, ಫಕ್ಕೀರಪ್ಪ, ಓಬಳೇಶ್, ನೇಮಿರಾಜ್ ನಾಯ್ಕ, ಚಂದ್ರಾ ನಾಯ್ಕ, ವಿರುಪಾಕ್ಷಿಗೌಡ, ಅನಿಲ್ ನಾಯ್ಡು, ಅನಂತ ಪದ್ಮನಾಭ, ಶಂಕರ್‌ ಮೇಟಿ ಇದ್ದರು.

ಪ್ರತಿಕ್ರಿಯಿಸಿ (+)