ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ದಿನವೇ ಅಭ್ಯರ್ಥಿಗಳ ವಿರುದ್ಧ ಮಾಟ, ಮಂತ್ರ

Last Updated 22 ಡಿಸೆಂಬರ್ 2020, 9:27 IST
ಅಕ್ಷರ ಗಾತ್ರ

ಹೊಸಪೇಟೆ: ಚುನಾವಣ ಗೆಲ್ಲುವುದಕ್ಕೆ ಅಡ್ಡ ದಾರಿಗಳು ಹಿಡಿಯುವುದನ್ನು ಕೇಳೇ ಇರ್ತೀವಿ. ಹೊಸಪೇಟೆ ತಾಲ್ಲೂಕಿನ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಡ್ಡಿರಾಂಪುರ ಗ್ರಾಮದಲ್ಲಿ ಅಭ್ಯರ್ಥಿಗಳ ವಿರುದ್ಧ ಮಾಟ, ಮಂತ್ರ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಕೆ. ಗೋಪಾಲ, ವಿ. ರೇಣುಕಮ್ಮ ಹಾಗೂ ಪಿ.ಎನ್‌. ಹನುಮಂತ ಅವರ ಭಾವಚಿತ್ರ ಇರುವ ಕರಪತ್ರಕ್ಕೆ ಕುಂಕುಮ ಹಚ್ಚಿ, ಅಕ್ಕಿ ಕಾಳು ಹಾಕಿ, ನಿಂಬೆ ಹಣ್ಣು ಮತ್ತು ಮೊಟ್ಟೆ ಇಡಲಾಗಿದೆ.

ಯಾರು ಈ ಮಾಟ ಮಂತ್ರ ಮಾಡಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಪ್ರತಿಸ್ಪರ್ಧಿಗಳು ಈ ಕೆಲಸ ಮಾಡಿಸಿರಬಹುದು ಎಂಬ ಶಂಕೆಯನ್ನು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. ಈ ವಿಷಯ ಗ್ರಾಮದಲ್ಲಿ ಮಂಗಳವಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT