ಶುಕ್ರವಾರ, ಏಪ್ರಿಲ್ 23, 2021
23 °C

ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಅಹಿಂದ ಯುವ ವೇದಿಕೆಯಿಂದ ಶನಿವಾರ ನಗರದ ಗಂಗಾ ಪರಮೇಶ್ವರಿ ವಿದ್ಯಾಸಂಸ್ಥೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್‌ಗಳನ್ನು ವಿತರಿಸಲಾಯಿತು.

ಬ್ಯಾಗ್‌ ವಿತರಿಸಿದ ಬಳಿಕ ಮಾತನಾಡಿದ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಲಿ, ‘ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರತಿ ವರ್ಷ ನಮ್ಮ ವೇದಿಕೆಯಿಂದ ನೆರವು ನೀಡಲಾಗುತ್ತದೆ. ಈ ವರ್ಷ ಎಲ್ಲ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್‌ ವಿತರಿಸಲಾಗಿದೆ’ ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕಿ ಸರಳಾ, ಅಹಿಂದ ಯುವ ವೇದಿಕೆಯ ಗೌರವ ಅಧ್ಯಕ್ಷ ಆರ್.ಚೇತನ್‍ರಾಜ್ ಜೈನ್, ಉಪಾಧ್ಯಕ್ಷ ಗಂಗಾಧರ, ಕಾರ್ಯದರ್ಶಿ ಪಿ.ಬಸವರಾಜ್, ಖಜಾಂಚಿ ಸಿ.ಕೊಟ್ರೇಶ್, ಮುಖಂಡರಾದ ಕೇಶವ, ಖಾದರ್, ಪಂಪಣ್ಣ, ಎಚ್.ಶೇಷಾ, ಟಿ.ಹನುಮಂತ, ಎಂ. ಜಗನ್ನಾಥ, ಇಂಗಳಿಗಿ ದ್ಯಾಮಣ್ಣ, ಕೆ.ರಾಘವೇಂದ್ರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.