15ರಂದು ಜೆಸ್ಕಾಂ ಗ್ರಾಹಕರ ಸಂವಾದ ಸಭೆ

7

15ರಂದು ಜೆಸ್ಕಾಂ ಗ್ರಾಹಕರ ಸಂವಾದ ಸಭೆ

Published:
Updated:

ಹೊಸಪೇಟೆ: ಜೆಸ್ಕಾಂ ಗ್ರಾಹಕರ ಸಂವಾದ ಸಭೆ ಇದೇ 15ರಂದು ಮಧ್ಯಾಹ್ನ 3ಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯ ಆವರಣದಲ್ಲಿ ನಡೆಯಲಿದೆ.

ಗ್ರಾಹಕರಲ್ಲಿ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಜೆಸ್ಕಾಂ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮನವಿ ಮಾಡಿದ್ದಾರೆ.

19ರಂದು ಪತ್ತಿನ ಸಂಘದ ಸಭೆ

ತಾಲ್ಲೂಕಿನ ಮಲಪನಗುಡಿ ಗ್ರಾಮ ಪಂಚಾಯಿತಿಯಲ್ಲಿ ಇದೇ 19ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಜನ ಸಭೆ ಕರೆಯಲಾಗಿದೆ.

ಅಂದು ಬೆಳಿಗ್ಗೆ 10.30ಕ್ಕೆ ಸಂಘದ ಅಧ್ಯಕ್ಷ ಎಲ್‌. ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ. ಎಲ್ಲ ಸದಸ್ಯರು ಪಾಲ್ಗೊಳ್ಳಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ಎಲ್‌. ರಾಮಪ್ಪ ಕೋರಿದ್ದಾರೆ.

‘ಬಳ್ಳಾರಿಗೆ ಪ್ರಾತಿನಿಧ್ಯ ಸಿಗಲಿ’

‘ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಶಾಸಕ ಆನಂದ್‌ ಸಿಂಗ್‌ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಳ್ಳಾರಿ ಜಿಲ್ಲೆಯಿಂದ ಆರು ಜನ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಎಲ್ಲ ಶಾಸಕರು ಪಕ್ಷದಲ್ಲಿಯೇ ಇದ್ದೇವೆ. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿಲ್ಲ. ಡಿ.ಕೆ. ಶಿವಕುಮಾರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿರುವುದಕ್ಕೆ ಯಾವುದೇ ಅಭ್ಯಂತರವಿಲ್ಲ’ ಎಂದು ಸ್ಪಷ್ಟಪಡಿಸಿದರು.

16ರಂದು ‘ವಿಜಯನಗರದ ಐಸಿರಿ’

ಹೊಸಪೇಟೆಯಲ್ಲಿನ ಆಕಾಶವಾಣಿ ಕೇಂದ್ರದಿಂದ ಇದೇ 16ರಂದು ಸಂಜೆ 5ಕ್ಕೆ ‘ವಿಜಯನಗರದ ಐಸಿರಿ’ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಂದು ಸಂಜೆ ‘ಸಂಗೀತ ಸಿರಿ’ಯಲ್ಲಿ ಬಳ್ಳಾರಿಯ ಸಂಧ್ಯಾರಾವ್ ಹಾಗೂ ಸಂಗಡಿಗರು ಭಕ್ತಿಗೀತೆ ಹಾಡುವರು. ‘ವಿದ್ಯಾಸಿರಿ’ಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ಡಿ. ಪ್ರಶಾಂತ್ ಅವರು ‘ಸಾಂಸ್ಕೃತಿಕ ಆಚರಣೆ ಮತ್ತು ವೈವಿಧ್ಯ’ ಕುರಿತು ವಿವರಿಸುವರು. ‘ಪ್ರತಿಭಾ ಸಿರಿ’ಯಲ್ಲಿ ಮುನಿರಾಬಾದ್‌ನ ಶ್ರುತಿ ಹ್ಯಾಟಿ ಅವರೊಂದಿಗೆ ಅರುಣ್‌ ನಾಯಕ ಮಾತುಕತೆ ನಡೆಸುವರು. ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ಅವರು ‘ಪರೀಕ್ಷಾ ಯಶಸ್ಸಿನ ಗುಟ್ಟು’ ಕುರಿತು ಮಾತನಾಡುವರು.

‘ನಂತರ ವಾರದ ವರದಿ, ಸಂದೇಶ, ಅಮೃತವಾಣಿ ಪ್ರಸಾರವಾಗಲಿದೆ’ ಎಂದು ಕಾರ್ಯಕ್ರಮದ ಮುಖ್ಯಸ್ಥೆ ಅನುರಾಧ ಕಟ್ಟಿ ತಿಳಿಸಿದ್ದಾರೆ.

ಉಚಿತ ಚದುರಂಗ ಸ್ಪರ್ಧೆ

ರೋಟರಿ ಕ್ಲಬ್‌ನಿಂದ ಇದೇ 20ರಂದು ತಾಲ್ಲೂಕಿನ ಶಾಲಾ ಮಕ್ಕಳಿಗೆ ಉಚಿತ ಚದುರಂಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

12 ಮತ್ತು 16 ವರ್ಷದೊಳಗಿನ ಶಾಲಾ ಮಕ್ಕಳು ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಇದೇ 18ರ ಒಳಗೆ ಮೊಬೈಲ್‌ ಸಂಖ್ಯೆ 99456 80284, 99161 50998, 85468 67624ರಲ್ಲಿ ಯಾವುದಾದರೂ ಒಂದಕ್ಕೆ ಎಸ್‌.ಎಂ.ಎಸ್‌. ಮೂಲಕ ಹೆಸರು, ಶಾಲೆ, ಜನ್ಮದಿನಾಂಕದ ವಿವರವನ್ನು ಕಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

‘ಆರೋಗ್ಯ ಕ್ಷೇಮ’ ಕೇಂದ್ರ ಉದ್ಘಾಟನೆ

ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಇತ್ತೀಚೆಗೆ ‘ಆರೋಗ್ಯ ಮತ್ತು ಕ್ಷೇಮ’ ಕೇಂದ್ರವನ್ನು ಕಾಂಗ್ರೆಸ್‌ ಮುಖಂಡ ರತನ್‌ ಸಿಂಗ್‌ ಉದ್ಘಾಟಿಸಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಪವನ್‌ ಕುಮಾರ್‌ ಮಾತನಾಡಿ, ‘ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಇತರೆ ಸಣ್ಣ ಕಾಯಿಲೆಗಳಿಗೆ ಗ್ರಾಮೀಣ ಪ್ರದೇಶದ ಜನ ನಗರಕ್ಕೆ ಹೋಗುವ ಅವಶ್ಯಕತೆ ಇಲ್ಲ. ಆರೋಗ್ಯ ಕ್ಷೇಮ ಕೇಂದ್ರದಲ್ಲೇ ಚಿಕಿತ್ಸೆ ಪಡೆಯಬಹುದು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ಬಸವರಾಜ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಜಿ. ಪರಮೇಶ್ವರ ರಾವ್‌, ಡಾ. ನಾಗೇಂದ್ರ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಆರೋಗ್ಯ ಸಹಾಯಕ ಧರ್ಮನಗೌಡ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !