ಗುರುವಾರ , ಆಗಸ್ಟ್ 18, 2022
24 °C
ಅವಧಿ ಪೂರ್ಣಗೊಳ್ಳುವವರೆಗೆ ಯಡಿಯೂರಪ್ಪ ಮುಂದುವರಿಯಲಿ; ಮಠಾಧೀಶರ ಧರ್ಮ ಪರಿಷತ್ತು ಆಗ್ರಹ

ಚುನಾವಣೆ ಎದುರಿಸುವಾಗ ಬಿಎಸ್‌ವೈಗೆ ಹಲ್ಲು ಹೋಗಿ, ಬೆನ್ನು ಬಾಗಿರಲಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಬಿ.ಎಸ್‌. ಯಡಿಯೂರಪ್ಪನವರಿಗೆ ವಯಸ್ಸಾಗಿರುವುದರಿಂದ ಅವರು ಅಧಿಕಾರ ಬಿಡಬೇಕು ಎಂದು ಕೆಲವು ನಾಯಕರು ಈಗ ಹೇಳುತ್ತಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವಾಗ ಅವರ ಹಲ್ಲು ಹೋಗಿ, ಬೆನ್ನು ಬಾಗಿರಲಿಲ್ಲವೇ? ಅಧಿಕಾರಕ್ಕೆ ಬಂದ ನಂತರ ವರಸೆ ಬದಲಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಈ ಅವಧಿ ಪೂರ್ಣಗೊಳ್ಳುವವರೆಗೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು’

ಇದು ವೀರಶೈವ ಮಠಾಧೀಶರ ಧರ್ಮ ಪರಿಷತ್ತಿನ ಸ್ವಾಮೀಜಿಗಳ ಹಕ್ಕೊತ್ತಾಯ. ಗುರುವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪರಿಷತ್ತಿನ 15 ಸ್ವಾಮೀಜಿಗಳು, ‘ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಗಳಾಗಿ ಮುಂದುವರೆಸಬೇಕು. ನಾಯಕತ್ವ ಬದಲಾವಣೆ ವಿಚಾರ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಆಮ್ಲಜನಕ ಇದ್ದಂತೆ. ಅವರಿಲ್ಲದೆ ಹೋದರೆ ವೆಂಟಿಲೇಟರ್ ಬೇಕಾಗುತ್ತದೆ. ಇದು ಸಮುದಾಯದವರ ಅಭಿಪ್ರಾಯ. ಅದನ್ನೇ ಸಮಾಜದ ಮುಖವಾಣಿಯಾಗಿ ನಾವು ಹೇಳುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ... ಮುಖ್ಯಮಂತ್ರಿ ಯಡಿಯೂರಪ್ಪಗೆ ವಯಸ್ಸಾಗಿದ್ದು, ಪ್ರಭಾವ ಮಬ್ಬಾಗಿದೆ: ಎಚ್.ವಿಶ್ವನಾಥ್

‘ರಾಜಕಾರಣಿಗಳು ದಾರಿ ತಪ್ಪಿದಾಗ ಸನ್ಮಾರ್ಗದಲ್ಲಿ ನಡೆಯಿರಿ ಎಂದು ಸಂದೇಶ ನೀಡುವುದು ಸ್ವಾಮೀಜಿಗಳ ಜವಾಬ್ದಾರಿ. ಯಡಿಯೂರಪ್ಪ ಯುವಕರಂತೆ ಓಡಾಡಿ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಯಾವುದೇ ಬೆಲ್ಲ, ಸಕ್ಕರೆ ಹಾಗೂ ಇತರೆ ಶಕ್ತಿ ಅವರಿಗೆ ಏನು ಮಾಡಲಾಗದು’ ಎಂದರು.

ಪರಿಷತ್ತಿನ ಅಧ್ಯಕ್ಷ ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಎಮ್ಮಿಗನೂರು ಮಹಾಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯರು, ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ, ಹಿರೇಹಡಗಲಿ ಅಭಿನವ ಹಾಲಸ್ವಾಮೀಜಿ, ಜಗಳೂರು ತಾಲ್ಲೂಕು ಮುಸ್ಟೂರ ರುದ್ರಮುನಿ ಶಿವಾಚಾರ್ಯರು, ಬುಕ್ಕಸಾಗರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಹರಗಿನಡೋಣಿಯ ಪಂಚವಣಗಿ ಮಠದ ಸಿದ್ದಲಿಂಗ ಸ್ವಾಮೀಜಿ, ಹಳೆಕೋಟೆ ಮರಿಸಿದ್ದ ಬಸವಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ, ಹಡಗಲಿಯ ಗವಿಸಿದ್ದೇಶ್ವರ ಮಠದ ಹಿರಿಯ ಶಾಂತವೀರಸ್ವಾಮೀಜಿ, ಮಲ್ಲನಕೆರೆ ಚೆನ್ನಬಸವ ಸ್ವಾಮೀಜಿ, ಬೆಣ್ಣೆಹಳ್ಳಿ ಪಂಚಾಕ್ಷರಿ ಶಿವಾಚಾರ್ಯರು, ಜಂಗಮರ ಹೊಸಹಳ್ಳಿಯ ಅಜಾತಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಇದ್ದರು.

ಇದನ್ನೂ ಓದಿ... ನಿಮಗೆ ವಯಸ್ಸಾಗಿಲ್ಲವೇ? ವಿಶ್ವನಾಥ್‌ಗೆ ರೇಣುಕಾಚಾರ್ಯ ತಿರುಗೇಟು  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು