ಕೇಂದ್ರ ಸರ್ಕಾರದ ದುರಾಡಳಿತ: ಏಕಾಂಬ್ರಪ್ಪ

7

ಕೇಂದ್ರ ಸರ್ಕಾರದ ದುರಾಡಳಿತ: ಏಕಾಂಬ್ರಪ್ಪ

Published:
Updated:
Deccan Herald

ತೋರಣಗಲ್ಲು: ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸೋಮವಾರ ಸಂಚರಿಸಿ ಅಂಗಡಿಗಳನ್ನು ಮುಚ್ಚಿಸಿ, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದರು. ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

‘ದೇಶದಲ್ಲಿ ಬಿಜೆಪಿ ಜನವಿರೋಧಿ ಆಡಳಿತ ನಡೆಸುತ್ತಿದೆ. ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ತೋರಣಗಲ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬ್ರಪ್ಪ ಆಗ್ರಹಿಸಿದರು.

ಮುಖಂಡರಾದ ಜನಾರ್ಧನ್, ನೂರ್‍ಅಹಮ್ಮದ್, ಕೆ.ಎಸ್.ಬಸಪ್ಪ, ಎಚ್.ವಿರೇಶ್, ಎನ್.ಮಲ್ಲಯ್ಯ, ಕೆ.ಶಂಕರ್, ಗುರು, ಯು.ಶಿವಕುಮಾರ, ಸಿಕಂದರ್, ಲೋಕೇಶ್ ಬುಡ್ಡಿಗ, ಕೋನಪ್ಪ, ಎಚ್.ಪಂಪಾಪತಿ, ಚಂದ್ರಶೇಖರ್, ಮಂಜುನಾಥ, ಅಬ್ದುಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !