ಭಾನುವಾರ, ಜನವರಿ 17, 2021
18 °C

ಬಳ್ಳಾರಿ: ಜೈವಿಕ ಉದ್ಯಾನಕ್ಕೆ ಬಸ್‌ ಸಂಚಾರ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಿಂದ ಬುಧವಾರ ಬಸ್‌ ಸಂಚಾರ ಪುನರಾರಂಭಗೊಂಡಿದೆ.

ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ, ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌ ಅವರು ಇಲ್ಲಿನ ನಿಲ್ದಾಣದಲ್ಲಿ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ನೀಡಿದರು.

ಉದ್ಯಾನಕ್ಕೆ ಮಂಗಳವಾರ ರಜೆ ಇರುವುದರಿಂದ ಆ ದಿನ ಹೊರತುಪಡಿಸಿ ಉಳಿದ ದಿನ ಬಸ್‌ ಸಂಚರಿಸಲಿದೆ. ಕೇಂದ್ರ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 9.15, 10.45, ಮಧ್ಯಾಹ್ನ 12.30, 2.30 ಹಾಗೂ ಸಂಜೆ 4.15ಕ್ಕೆ ಹೊರಡಲಿದೆ. ಕಮಲಾಪುರ ಮಾರ್ಗವಾಗಿ ಬಸ್‌ ಸಂಚರಿಸಲಿದೆ.

ಉದ್ಯಾನದಿಂದ ಬೆಳಿಗ್ಗೆ 10, 11.30, ಮಧ್ಯಾಹ್ನ 1.15, 3.15 ಹಾಗೂ ಸಂಜೆ 5ಕ್ಕೆ ನಿರ್ಗಮಿಸುವ ಬಸ್‌, ಪಾಪಿನಾಯಕನಹಳ್ಳಿ, ಕಾರಿಗನೂರು, ಬಳ್ಳಾರಿ ವೃತ್ತದ ಮೂಲಕ ಕೇಂದ್ರ ಬಸ್‌ ನಿಲ್ದಾಣ ಬಂದು ಸೇರಲಿದೆ. ಸಾರ್ವಜನಿಕರು ಬಸ್‌ಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶೀನಯ್ಯ ತಿಳಿಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು