ಹೊಸಪೇಟೆ: ಮುರುಗನ್‌ ಜಾತ್ರೆ ಸಂಭ್ರಮ

7
ದೇಹ ಹಿಂಸಿಸಿಕೊಂಡು ಭಕ್ತಿ ಸಮರ್ಪಿಸಿದ ಭಕ್ತರು

ಹೊಸಪೇಟೆ: ಮುರುಗನ್‌ ಜಾತ್ರೆ ಸಂಭ್ರಮ

Published:
Updated:
Deccan Herald

ಹೊಸಪೇಟೆ: ತಾಲ್ಲೂಕಿನ ಕಡ್ಡಿರಾಂಪುರ ಹಾಗೂ ನಿಶಾನಿ ಕ್ಯಾಂಪ್‌ನಲ್ಲಿ ಭಾನುವಾರ ಮುರುಗನ್‌ ಜಾತ್ರಾ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಕಡ್ಡಿರಾಂಪುರ ಬಳಿಯ ಹೊಳೆಯಲ್ಲಿ ಗಂಗೆ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ಉತ್ಸವಮೂರ್ತಿ ಮೆರವಣಿಗೆ ಮಾಡಿದರು. ಮಹಿಳೆಯರು ಕಲಶ ಹೊತ್ತು ಹೆಜ್ಜೆ ಹಾಕಿದರು. ಪುರುಷರು ದೇಹದ ವಿವಿಧ ಭಾಗಗಳಿಗೆ ಸೂಜಿಗಳನ್ನು ಚುಚ್ಚಿಕೊಂಡಿದ್ದರು. ಆಟೊ, ಕಾರು, ರೋಲರ್‌ ಎಳೆದರು. ಕ್ರೇನ್‌ಗೆ ದೇಹವನ್ನು ನೇತು ಹಾಕಿಕೊಂಡು ದೇಹವನ್ನು ಹಿಂಸಿಸಿಕೊಂಡರು. ಮೆರವಣಿಗೆ ಹಾದು ಹೋಗುತ್ತಿದ್ದ ಮಾರ್ಗಗಳಲ್ಲಿ ಈ ದೃಶ್ಯವನ್ನು ನೋಡಿ ಜನ ಚಕಿತರಾದರು.

ಇದಕ್ಕೂ ಮುನ್ನ ದೇಗುಲದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಜಾತ್ರೆ ಅಂಗವಾಗಿ ದೇವಸ್ಥಾನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. 

ನಿಶಾನಿ ಕ್ಯಾಂಪ್‌ ದೇವಸ್ಥಾನದಲ್ಲೂ ವಿಶೇಷ ಪೂಜಾ, ಕೈಂಕರ್ಯಗಳು ನಡೆದವು. ಬೆಳಿಗ್ಗೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಅಲ್ಲಿಂದ ದೇಗುಲದ ವರೆಗೆ ಮೆರವಣಿಗೆ ಮಾಡಿದರು. ಮಹಿಳೆಯರು ಪವಿತ್ರ ಕುಂಭಗಳೊಂದಿಗೆ ಹೆಜ್ಜೆ ಹಾಕಿದರು. 

 

ದೇಗುಲದ ಪ್ರಮುಖರಾದ ಅಪ್ಪವ್ವ, ಮೂರ್ತಿ, ಶ್ರೀನಿವಾಸುಲು, ಎಂ.ಎಂ. ಮೂರ್ತಿ, ಎಂ.ಎಂ. ಮಣಿ, ಸುಂದರ್‌, ಲೋಕನಾಥ್‌ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !