ನಾಗಪ್ಪನಿಗೆ ಹಾಲೆರೆದು ಭಕ್ತಿ ಸಮರ್ಪಣೆ

7

ನಾಗಪ್ಪನಿಗೆ ಹಾಲೆರೆದು ಭಕ್ತಿ ಸಮರ್ಪಣೆ

Published:
Updated:
Deccan Herald

ಹೊಸಪೇಟೆ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಂಗಳವಾರ ನಾಗರಪಂಚಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ರಾಣಿಪೇಟೆಯ ನಾಗಪ್ಪನ ಕಟ್ಟೆಯಲ್ಲಿರುವ ನಾಗದೇವತೆಯ ಕಲ್ಲಿನ ಮೂರ್ತಿಗೆ ಮಹಿಳೆಯರು ಹೂವಿನಿಂದ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸರತಿ ಸಾಲಿನಲ್ಲಿ ನಿಂತು ಹಾಲೆರೆದರು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಜನಜಾತ್ರೆ ಕಂಡು ಬಂತು.

ತಾಲ್ಲೂಕಿನ ಬುಕ್ಕಸಾಗರದ ಏಳುಹೆಡೆ ನಾಗಪ್ಪನಿಗೆ ಬೆಳಿಗ್ಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಹಾಲಿನ ಮಜ್ಜನ ಮಾಡಲಾಯಿತು. ನಾಗಪ್ಪನ ಮೂರ್ತಿಗೆ ಹಾಲೆರೆದರು. ಕಮಲಾಪುರ, ಹೊಸೂರು, ವ್ಯಾಸನಕೆರೆ, ಡಣಾಯನಕೆರೆಯಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಿ, ಹಾಲು ಎರೆದರು.

ಹಬ್ಬದ ನಿಮಿತ್ತ ಪಾಯಸ, ಕಡುಬು ಹಾಗೂ ಹೋಳಿಗೆ ಮಾಡಿ ಸವಿದರು. ಹೊಸ ವಸ್ತ್ರಗಳನ್ನು ತೊಟ್ಟು ಮಹಿಳೆಯರು ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !