ಆಸ್ಪತ್ರೆ ಪರಿಸರದಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನ

7

ಆಸ್ಪತ್ರೆ ಪರಿಸರದಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನ

Published:
Updated:
Deccan Herald

ಹೊಸಪೇಟೆ: ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಪೂರಕವಾಗಿ ಕೈಗೊಂಡಿರುವ ‘ಸ್ವಚ್ಛತೆಯೇ ಸೇವೆ’ ಕಾರ್ಯ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಶನಿವಾರ ಸಂಜೆ ನಡೆಯಿತು.

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆಸ್ಪತ್ರೆಯ ಪರಿಸರದಲ್ಲಿ ಬೆಳೆದು ನಿಂತಿದ್ದ ಮುಳ್ಳು, ಕಂಟಿ, ಹುಲ್ಲು, ಪೊದೆಯನ್ನು ಕಿತ್ತು ಸ್ವಚ್ಛಗೊಳಿಸಿದರು.

ಬಳಿಕ ಮಾತನಾಡಿದ ಪಕ್ಷದ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ‘ಪಕ್ಷದ ವತಿಯಿಂದ ಮುಂದಿನ ಹತ್ತು ದಿನಗಳ ವರೆಗೆ ನಗರದ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು. ಜತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಈ ಅಭಿಯಾನ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಪಕ್ಷದ ಮುಖಂಡರಾದ ಮೃತ್ಯುಂಜಯ ಜಿನಗಾ, ಗುದ್ಲಿ ಪರಶುರಾಮ, ಜಂಬಾನಹಳ್ಳಿ ವಸಂತ, ಅಶೋಕ್‌ ಜೀರೆ, ಯಮುನೇಶ್‌, ಶಂಕರ್‌ ಮೇಟಿ, ಸತ್ಯನಾರಾಯಣ, ಸಂಗಪ್ಪ, ಬಿ. ಶಂಕರ್‌, ಮಧುಸೂದನ್‌, ನಾಗರಾಜ್‌, ಸುಬ್ರಮಣ್ಯ, ಚಂದ್ರಕಾಂತ ಕಾಮತ್‌, ಆಶಾರಾಣಿ, ಪ್ರಿಯಾಂಕ, ಮಂಜುಳಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !