‘ವಾಲಂಟೀಯರ್ ಕ್ಲಬ್‌’ನಿಂದ ಹಳೆ ವಸ್ತು ಸಂಗ್ರಹ

7

‘ವಾಲಂಟೀಯರ್ ಕ್ಲಬ್‌’ನಿಂದ ಹಳೆ ವಸ್ತು ಸಂಗ್ರಹ

Published:
Updated:
ಹೊಸಪೇಟೆಯಲ್ಲಿ ಭಾನುವಾರ ‘ವಾಲಂಟೀಯರ್ ಕ್ಲಬ್’ ಸದಸ್ಯರು ಸಾರ್ವಜನಿಕರಿಂದ ಹಳೆಯ ವಸ್ತುಗಳನ್ನು ಸಂಗ್ರಹಿಸಿದರು–ಪ್ರಜಾವಾಣಿ ಚಿತ್ರ

ಹೊಸಪೇಟೆ: ‘ವಾಲಂಟೀಯರ್‌ ಕ್ಲಬ್‌’ನಿಂದ ಭಾನುವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ‘ಹಂಬಲ್‌ ಹ್ಯಾಂಡ್ಸ್‌’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

270 ಜನ ಸ್ವಯಂಪ್ರೇರಣೆಯಿಂದ ಬಂದು ಬಟ್ಟೆ, ಪುಸ್ತಕ, ಕುಡಿಯುವ ನೀರಿನ ಬಾಟಲಿ, ಹೊದಿಕೆ, ಬೆಡ್‌ಶೀಟ್‌, ವಾಷಿಂಗ್‌ ಮಶೀನ್‌ ಸೇರಿದಂತೆ ಇತರೆ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡಿದರು. ‘ಮನೆಯಲ್ಲಿ ಉಪಯೋಗಿಸದೆ ಇಟ್ಟಿರುವ ವಸ್ತುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ಅವುಗಳನ್ನು ಅಗತ್ಯ ಇರುವವರಿಗೆ ಪೂರೈಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಕ್ಲಬ್‌ ಅಧ್ಯಕ್ಷ ಬಿ.ಎನ್‌. ಮಂಜುನಾಥ್‌ ಹೇಳಿದರು.

ಸಂಚಾರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಯ್ಯನಗೌಡ ಪಾಟೀಲ, ಬಳ್ಳಾರಿ ಉಪವಿಭಾಗಾಧಿಕಾರಿ ವಿಶ್ವಜೀತ್‌ ಮೆಹ್ತಾ, ಉದ್ಯಮಿ ಪೃಥ್ವಿರಾಜ್‌ ಸಿಂಗ್‌, ಜಯಂತ್‌ ಪಂತರ್‌, ಡಾ. ಲಲಿತ್‌ ಜೈನ್‌, ಹಗರಿಬೊಮ್ಮನಹಳ್ಳಿ ತಹಶೀಲ್ದಾರ್‌ ವಿಜಯಕುಮಾರ ಇದ್ದರು, ಕ್ಲಬ್‌ ಉಪಾಧ್ಯಕ್ಷ ಅಭಿಷೇಕ್‌ ಸಿಂಗ್‌, ಕಾರ್ಯದರ್ಶಿ ಅಬುಲ್‌ ಕಲಾಂ ಆಜಾದ್‌, ಜಂಟಿ ಕಾರ್ಯದರ್ಶಿ ಶಬ್ಬೀರ್‌, ಖಜಾಂಚಿ ಸಾಗರ್‌, ಸದಸ್ಯರಾದ ರಮೇಶ, ಆನಂದ್‌, ರಾಜು, ಶಿವರಾಮ ಇದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !