ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನಿಂದನೆ ಪ್ರಕರಣಕ್ಕೆ ಖಂಡನೆ

Last Updated 16 ಸೆಪ್ಟೆಂಬರ್ 2021, 8:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿಯಲ್ಲಿ ಗಂಗಾಮತ ಸಮಾಜದ ಬಾರಿಕರ ಶಿವಪ್ಪ ವಿರುದ್ಧ ದಾಖಲಿಸಿರುವ ಜಾತಿ ನಿಂದನೆ ಪ್ರಕರಣವನ್ನು ತಾಲ್ಲೂಕು ಗಂಗಾಮತಸ್ಥರ ಸಂಘ ತೀವ್ರವಾಗಿ ಖಂಡಿಸಿದೆ.

ಹೊಳಗುಂದಿಯಲ್ಲಿ ಇತ್ತೀಚೆಗೆ ಧಾನ್ಯದ ಕಣಕ್ಕೆ ಸಂಬಂಧಿಸಿದಂತೆ ರೈತ ಬಾರಿಕರ ಶಿವಪ್ಪ ಹಾಗೂ ಅನ್ಯ ಜಾತಿಯ ಶಾಂತಿನಗೌಡ ನಡುವೆ ಸಣ್ಣ ಘರ್ಷಣೆಯಾಗಿದೆ. ಆದರೆ, ಘಟನಾ ಸ್ಥಳದಲ್ಲಿ ಇರದ ಮಹಾಬಲೇಶ್ವರ ಎಂಬುವರು ದುರುದ್ದೇಶದಿಂದ ಬಾರಿಕರ ಶಿವಪ್ಪ ವಿರುದ್ಧ ಜಾತಿನಿಂದನೆ ದೂರು ಕೊಟ್ಟಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಸುಳ್ಳು ಪ್ರಕರಣ ಕೈಬಿಡಬೇಕೆಂದು ಗುರುವಾರ ನಗರದಲ್ಲಿ ತಹಶೀಲ್ದಾರ್‌ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದರು.

ಗ್ರಾಮೀಣ ಭಾಗದಲ್ಲಿ ಪರಿಶಿಷ್ಟರು ಹಾಗೂ ಹಿಂದುಳಿದವರ ನಡುವೆ ಘರ್ಷಣೆ ಉಂಟು ಮಾಡಿ, ವಾತಾವರಣ ಕದಡಿ ರಾಜಕೀಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಿದ್ದಾರೆ. ಅದಕ್ಕೆ ಯಾರೂ ಬಲಿಪಶು ಆಗಬಾರದು ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಸ್.ಗಾಳೆಪ್ಪ, ಗೌರವ ಅಧ್ಯಕ್ಷ ವೈ.ಯಮುನೇಶ್, ಉಪಾಧ್ಯಕ್ಷ ಸಣ್ಣಕ್ಕೆಪ್ಪ, ಕಾರ್ಯದರ್ಶಿ ಮೇಘನಾಥ, ಬಿ.ನಾಗರಾಜ, ಕಂಪ್ಲಿ ಹನುಮಂತಪ್ಪ, ಅಭಿಮನ್ಯು, ಕೆ.ಭರ್ಮಪ್ಪ, ಕುರದಗಡ್ಡಿ ಹುಲುಗಪ್ಪ, ಸುಂಕದ ದುರುಗಪ್ಪ, ರೂಪನಗುಡಿ ಗಾಳೆಪ್ಪ, ಕೂಡ್ಲಿಗಿ ಗಂಗಾಧರ, ಕೌದಿ ನಾಗರಾಜ, ಸುಭಾಷ್ ಚಂದ್ರ, ಕೆ.ಈರಣ್ಣ ಎಸ್.ಗುರುರಾಜ, ಜಾಲಗಾರ ರಮೇಶ, ನಂದಿಹಳ್ಳಿ ನಾಗರಾಜ, ಕೆ.ಕುಬೇರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT