ತೈಲ ದರ ಏರಿಕೆಗೆ ಕಾಂಗ್ರೆಸ್ ಕಾರಣ: ಶಾಸಕ ಜಿ.ಸೋಮಶೇಖರರೆಡ್ಡಿ

7

ತೈಲ ದರ ಏರಿಕೆಗೆ ಕಾಂಗ್ರೆಸ್ ಕಾರಣ: ಶಾಸಕ ಜಿ.ಸೋಮಶೇಖರರೆಡ್ಡಿ

Published:
Updated:
Deccan Herald

ಬಳ್ಳಾರಿ: “ಇಂಧನ ದರ ಅತಿಯಾಗಿ ಏರಲು ಕಾರಣವಾಗಿರುವ ಕಾಂಗ್ರೆಸ್‌ ತಾನು ಮಾಡಿರುವ ತಪ್ಪಿಗೆ ಬಿಜೆಪಿಯನ್ನು ದೂಷಿಸಿ ಜನರನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ’ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಆರೋಪಿಸಿದರು.

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನಾಧರಿಸಿ ಇಲ್ಲಿನ ಬೆಲೆ ಏರಿಕೆಯಾಗುತ್ತದೆ. ದೇಶದಲ್ಲಿ ಪೂರೈಕೆಯಾಗುತ್ತಿರುವ ಇಂಧನ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರವನ್ನು
ಒತ್ತಾಯಿಸಲಾಗುವುದು’ ಎಂದರು.

‘ರಾಜ್ಯ ನಾಯಕರ ನಿಯೋಗದೊಂದಿಗೆ ತೆರಳಿ ತೈಲ ದರ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ಮತ್ತು ನಾಯಕರು ತೈಲ ದರ ಏರಿಕೆ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಜನರ ನೋವು ತಿಳಿದಿದೆ. ಮುಂದಿನ 2–3 ತಿಂಗಳಲ್ಲಿ ತೈಲ ಬೆಲೆ ಇಳಿಕೆಯಾಗಲಿದೆ’ ಎಂದರು.

ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಎಸ್.ಮಲ್ಲನಗೌಡ, ಮುಖಂಡರಾದ ಎಚ್.ಹನುಮಂತಪ್ಪ, ಮುರಹರಿಗೌಡ, ಕೆ.ಎ.ರಾಮಲಿಂಗಪ್ಪ, ಕೆ.ಶಶಿಕಲ, ಶ್ರೀನಿವಾಸ ಪಾಟೀಲ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !