ಶುಕ್ರವಾರ, ಆಗಸ್ಟ್ 12, 2022
20 °C

ಬಳ್ಳಾರಿ ಜಿಲ್ಲೆಯಾದ್ಯಂತ ಸತತ ಮಳೆ: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಬಳ್ಳಾರಿ ಜಿಲ್ಲೆಯಾದ್ಯಂತ ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆ ಭಾನುವಾರವೂ ಮುಂದುವರೆದಿದೆ.

ಶನಿವಾರ ಸಂಜೆ ಜಿಟಿಜಿಟಿ ಮಳೆ ಆರಂಭಗೊಂಡಿತು. ರಾತ್ರಿಯಿಡೀ ಎಡೆಬಿಡದೆ ಸುರಿಯಿತು. ಭಾನುವಾರ ನಸುಕಿನ ಜಾವ ಕೆಲ ಸಮಯ ಬಿಡುವು ಕೊಟ್ಟ ಮಳೆ ಮತ್ತೆ ಶುರುವಾಯಿತು. ಪುನಃ ಮಧ್ಯಾಹ್ನ ಒಂದರಿಂದ ಎರಡು ಗಂಟೆಯ ವರೆಗೆ ಬಿಡುವು ಕೊಟ್ಟಿತ್ತು. ಬಳಿಕ ಮತ್ತೆ ತುಂತುರು ಮಳೆ ಆರಂಭಗೊಂಡಿದೆ.

ಸತತ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ದಟ್ಟ ಕಾರ್ಮೋಡಗಳು ಆವರಿಸಿಕೊಂಡಿವೆ. ಕಂಪ್ಲಿಯಲ್ಲಿ ಅತಿ ಹೆಚ್ಚು 72 ಮಿ.ಮೀ. ಮಳೆಯಾದರೆ, ಹರಪನಹಳ್ಳಿಯಲ್ಲಿ 11.4 ಮಿ.ಮೀ. ಅತಿ ಕಡಿಮೆ ಮಳೆಯಾಗಿದೆ. ಕೂಡ್ಲಿಗಿ, ಸಂಡೂರು, ಸಿರುಗುಪ್ಪ, ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಸೇರಿದಂತೆ ಎಲ್ಲೆಡೆ ಉತ್ತಮ ಮಳೆಯಾಗಿದೆ.

ಭಾನುವಾರ ರಜಾ ದಿನ, ಮೇಲಿಂದ ಮಳೆಯಾಗಿದ್ದರಿಂದ ಹೆಚ್ಚಿನವರು ಮನೆಯಿಂದ ಹೊರಗೆ ಬರಲಿಲ್ಲ. ನಗರದ ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು.

ಇದನ್ನೂ ಓದಿ... Photos: ಬಳ್ಳಾರಿ ಜಿಲ್ಲೆಯಾದ್ಯಂತ ಸತತ ಮಳೆ


ಮಂಜು ಹೊದ್ದುಕೊಂಡಿರುವ ಹೊಸಪೇಟೆ ನಗರ, ಜೋಳದರಾಶಿ ಗುಡ್ಡ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು