ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಭಿಮಾನಕ್ಕಾಗಿ ಚುನಾವಣೆಗೆ ಸ್ಪರ್ಧೆ’

Last Updated 21 ನವೆಂಬರ್ 2019, 15:59 IST
ಅಕ್ಷರ ಗಾತ್ರ

ಹೊಸಪೇಟೆ: ‘ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ. ಯಾವುದೇ ಅಧಿಕಾರ, ಅಂತಸ್ತಿಗಾಗಿ ಚುನಾವಣೆಗೆ ನಿಂತಿಲ್ಲ. ಕ್ಷೇತ್ರದ ಜನರ ಸ್ವಾಭಿಮಾನ ಎತ್ತಿ ಹಿಡಿಯಲು ಸ್ಪರ್ಧಿಸುತ್ತಿದ್ದೇನೆ’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್‌ ಹೇಳಿದರು.

ಗುರುವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಣದಿಂದ ಹಿಂದೆ ಸರಿಯಲು ಬಿಜೆಪಿಯವರು ನನಗೆ ದುಡ್ಡು, ಅಧಿಕಾರ ಕೊಡಲು ಬಂದರು. ಆದರೆ, ಅದನ್ನು ನಾನು ಧಿಕ್ಕರಿಸಿರುವೆ. ಬಿಜೆಪಿಯಲ್ಲಿ ಸಾಕಷ್ಟು ಮುಖಂಡರು, ಕಾರ್ಯಕರ್ತರಿಗೆ ಅನ್ಯಾಯವಾಗಿದೆ’ ಎಂದರು.

‘ನನ್ನನ್ನು ಪಕ್ಷದಿಂದ ತೆಗೆದು ಹಾಕಿದ್ದಾರೆ. ಅದರಿಂದ ನನಗೇನಾಗಬೇಕಾಗಿದೆ. ಆದರೆ, ಹಿಂದೆಯೂ ಬಿಜೆಪಿಯಲ್ಲಿದ್ದೆ. ಈಗಲೂ ಬಿಜೆಪಿಯಲ್ಲಿರುವೆ. ಮುಂದೆಯೂ ಅದೇ ಪಕ್ಷದಲ್ಲಿ ಇರುವೆ. ಶಂಕರಗೌಡ ಅವರ ಕಾಲದಿಂದಲೂ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ನಡುವೆ ಕೆಲವು ವರ್ಷ ಕಾರಣಾಂತರಗಳಿಂದ ಇರಲಿಲ್ಲ’ ಎಂದು ಹೇಳಿದರು.

‘ನನಗೆ ಟ್ರ್ಯಾಕ್ಟರ್‌ ಚಿಹ್ನೆ ಸಿಕ್ಕಿದೆ. ನಾನೊಬ್ಬ ರೈತನ ಮಗನಾಗಿದ್ದು, ಆ ಚಿಹ್ನೆ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಗೆದ್ದರೆ ಆನಂದ್‌ ಸಿಂಗ್‌ ಅವರು ವ್ಯವಸ್ಥಿತವಾಗಿ ಮುಚ್ಚಿಸಿರುವ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಆರಂಭಿಸುತ್ತೇನೆ. ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಯಲು ಶ್ರಮಿಸುತ್ತೇನೆ. ಬಂದ್‌ ಆಗಿರುವ ಉಕ್ಕಿನ ಕಾರ್ಖಾನೆಗಳನ್ನು ಆರಂಭಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT