ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಹೆಚ್ಚಿದ ತುಂಗಭದ್ರಾ ಅಣೆಕಟ್ಟೆ ಒಳಹರಿವು, ವಾರದ ಬಳಿಕ ಹರಿವು ಏರಿಕೆ

Last Updated 19 ಜುಲೈ 2020, 6:53 IST
ಅಕ್ಷರ ಗಾತ್ರ

ಹೊಸಪೇಟೆ: ವಾರದ ನಂತರ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಭಾನುವಾರ ಏರಿಕೆಯಾಗಿದೆ.

1,633 ಅಡಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,605.24 ಅಡಿ ನೀರಿನ ಸಂಗ್ರಹವಿದೆ. ಭಾನುವಾರ 17,138 ಕ್ಯುಸೆಕ್‌ ಒಳಹರಿವು, 289 ಕ್ಯುಸೆಕ್‌ ಹೊರಹರಿವು ದಾಖಲಾಗಿದೆ. ಶನಿವಾರ 6,153 ಕ್ಯುಸೆಕ್‌, ಶುಕ್ರವಾರ 6,662 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಹೋದ ಭಾನುವಾರದಿಂದ ಒಳಹರಿವು ಸತತವಾಗಿ ಕಡಿಮೆಯಾಗುತ್ತ ಬಂದಿತ್ತು. ಶುಕ್ರವಾರ ಏರಿಕೆ ಕಂಡಿದ್ದ ನೀರಿನ ಒಳಹರಿವು, ಶನಿವಾರ ಪುನಃ ತಗ್ಗಿತ್ತು. ಭಾನುವಾರ ಏಕಾಏಕಿ ಪುನಃ ಹೆಚ್ಚಳ ಕಂಡಿದೆ.

‘ಕೆಲವು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಾಗಿದೆ. ಸೋಮವಾರ ಮತ್ತಷ್ಟು ಏರಿಕೆ ಆಗಬಹುದು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT