ಶುಕ್ರವಾರ, ಜೂನ್ 25, 2021
22 °C

ಕೋವಿಡ್ ಲಸಿಕೆ: ಎರಡನೇ ಡೋಸ್‌ ಪಡೆಯಲು ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಸಾರ್ವಜನಿಕರ ನೂಕುನುಗ್ಗಲು ಏರ್ಪಟ್ಟಿತ್ತು.

ಜಿಲ್ಲಾಸ್ಪತ್ರೆ, ವಿಮ್ಸ್ ಆಸ್ಪತ್ರೆಯ ಲಸಿಕೆ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆ, ಆಯ್ದ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಜನ ಸಾಲುಗಟ್ಟಿದ್ದರು‌.

ಕೇಂದ್ರಗಳಲ್ಲಿ  ಬೆಳಿಗ್ಗೆ 10.30ರ ವೇಳೆಗೆ ಲಸಿಕೆ ನೀಡುವ‌ ಮುನ್ನ ನೋಂದಣಿ ಕಾರ್ಯ ಶುರುವಾಗುತ್ತಲೇ ಜನರಲ್ಲಿ ಕಾತರ ಶುರುವಾಯಿತು. ನೋಂದಣಿ ಮಾಡಿಕೊಳ್ಳುವವರ ಮುಂದೆ ಜನರ ಏಕಾಏಕಿ ಮುಗಿಬಿದ್ದರು.

ಜಿಲ್ಲಾಸ್ಪತ್ರೆ, ವಿಮ್ಸ್ ಆಸ್ಪತ್ರೆಯಲ್ಲಿ ಉದ್ದನೆಯ ಸಾಲಿತ್ತು.


ಬಳ್ಳಾರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಡೋಸ್ ಲಸಿಕೆಗಾಗಿ ಕಾಯುತ್ತಿರುವ ಮಹಿಳೆಯರು

ಕೇವಲ ನೂರು; ಪ್ರತಿ‌ ಕೇಂದ್ರಕ್ಕೆ ಕೇವಲ. 10 ವಯಲ್‌ಗಳನ್ನಷ್ಟೇ ನೀಡಲಾಗಿತ್ತು. ಪ್ರತಿ ವಯಲ್‌ನಲ್ಲಿ 10 ಮಂದಿಗಷ್ಟೇ ಲಸಿಕೆ ನೀಡಲು ಸಾಧ್ಯವಿದ್ದುದರಿಂದ ಬಹಳಷ್ಟು ಮಂದಿ ಲಸಿಕೆ ದೊರಕದೆ ವಾಪಸು ಹೋದರು.

ಮೊದಲನೇ ಡೋಸ್ ಇಲ್ಲ: ಮೊದಲನೇ ಡೋಸ್ ಲಸಿಕೆ ಪಡೆಯಲು ಬಂದವರನ್ನು‌ ಸಿಬ್ಬಂದಿ ವಾಪಸು ಕಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು