ಗುರುವಾರ , ಜೂನ್ 24, 2021
22 °C

ವಿಜಯನಗರ ಜಿಲ್ಲಾಡಳಿತದಿಂದ ಕೋವಿಡ್ ಸಹಾಯವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ(ವಿಜಯನಗರ): ‘ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸೂಕ್ತ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದ್ದಾರೆ.

ಕೋವಿಡ್–19 ಸಹಾಯವಾಣಿ 08394– 299920/21/22/23 ಅಥವಾ ವಾಟ್ಸ್‌ ಆ್ಯಪ್ ಸಂಖ್ಯೆ 9353449332, 9353470655ಗೆ ಸಂಪರ್ಕಿಸಿ ಕೋವಿಡ್19ಗೆ ಸಂಬಂಧಿಸಿದ ಕುಂದುಕೊರತೆ ಮತ್ತು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಛಾಯಾಚಿತ್ರ ಮತ್ತು ವಿಡಿಯೊಗಳನ್ನು ಕಳುಹಿಸಿ ನೆರವು ಪಡೆಯಬಹುದು. ಸಹಾಯವಾಣಿ ಕೇಂದ್ರವು ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.