ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕೋವಿಡ್ ಆಸ್ಪತ್ರೆಯಿಂದ 49 ಮಂದಿ‌ ಬಿಡುಗಡೆ

Last Updated 25 ಜೂನ್ 2020, 3:13 IST
ಅಕ್ಷರ ಗಾತ್ರ

ಬಳ್ಳಾರಿ: ತೋರಣಗಲ್‌ನಲ್ಲಿರುವ ಸಂಜೀವಿನಿ ಕೋವಿಡ್ ಆಸ್ಪತ್ರೆಯಿಂದ ಬುಧವಾರ ರಾತ್ರಿ 49 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 336ಕ್ಕೆ ‌ಇಳಿದಿದೆ.‌

ಇಲ್ಲಿಯವರೆಗೆ ಸೋಂಕಿನಿಂದ 194 ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿನ ಜೆಎಸ್‌ಡಬ್ಲ್ಯು ಸ್ಟೀಲ್‌ ಲಿಮಿಟೆಡ್ ಸಂಸ್ಥೆಯಲ್ಲಿ ಕೇವಲ 25 ದಿನದಲ್ಲಿ 296 ಸೋಂಕಿತರು ಕಂಡು ಬಂದಿದ್ದಾರೆ.

ಕೊರೆಕ್ಸ್‌ ಘಟಕದ ನೌಕರರೊಬ್ಬರಿಗೆ ಜೂನ್‌ 1ರಂದು ಸೋಂಕು ದೃಢಪಟ್ಟಾಗ ಇಡೀ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಯಷ್ಟೇ ಇತ್ತು. ಅವರೊಂದಿಗೆ ಮೊದಲ ಹಂತದಲ್ಲಿ 32 ಮಂದಿ ಮತ್ತು ಎರಡನೇ ಹಂತದಲ್ಲಿ 69 ಮಂದಿ ಸಂಪರ್ಕ ಹೊಂದಿದ್ದರು. ಈ 111 ಮಂದಿಯ ಪೈಕಿ ಬಹುತೇಕರಿಗೆ ಸೋಂಕು ತಗುಲಿದ್ದು, ಸಂಸ್ಥೆಯ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ, ಜಿಲ್ಲೆಯ ಆರು ತಾಲ್ಲೂಕುಗಳಿಂದ ಬರುವ ಉದ್ಯೋಗಿಗಳಿಗೂ ಹಬ್ಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT