ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹಗಳ ಮೂಲಕ ಜಾಗೃತಿ ಮೂಡಿಸಿ: ಶಾಸಕ ಪಿ.ಟಿ. ಪರಮೇಶ್ವರನಾಯ್ಕ

Last Updated 26 ಜನವರಿ 2021, 4:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಬರಹಕ್ಕೆ ಅದಮ್ಯ ಶಕ್ತಿ ಇದೆ. ಸಾಹಿತಿಗಳು, ಲೇಖಕರು ಹೊಸ ಆಲೋಚನೆಯ ಬರವಣಿಗೆಗಳ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ಸೇವಲಾಲ್ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಬರಹಗಾರರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನದ ಯುಗದಲ್ಲಿ ಜನರು ಮೊಬೈಲ್ ಇಂಟರ್‌ನೆಟ್ ನಲ್ಲಿ ಕಳೆದ ಹೋಗದೆ ಓದು, ಬರಹಗಳಲ್ಲಿ ತೊಡಗುವ ಮೂಲಕ ಸಂತೃಪ್ತಿ ಪಡೆಯಬೇಕು. ಬರಹಗಾರರು ಓದುಗರ ಆಸಕ್ತಿ ಬೆಳೆಸುವ ಬರಹಗಳ ಕಡೆ ಹೆಚ್ಚಿನ ಗಮನಹರಿಸಬೇಕು. ಆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಬರಹಗಾರರ ಸಂಘದ ಉಪಾಧ್ಯಕ್ಷ ಬಾವಿಹಳ್ಳಿ ಬಾರಾವಲಿ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಮಧುನಾಯ್ಕ ಅವರು ಆನ್‌ಲೈನ್ ಕವಿಗೋಷ್ಠಿ ವ್ಯವಸ್ಥಿತವಾಗಿ ಆಯೋಜಿಸಿ ಬರಹಗಾರರ ಸಂಘ ಉದಯವಾಗಲು ಪ್ರೇರಣೆಯಾಗಿದ್ದಾರೆ. ಸಂಘವನ್ನು ರಚನಾತ್ಮಕವಾಗಿ ಮುನ್ನೆಡೆಸಲು ಬರಹಗಾರರ ಸಹಕರಿಸಬೇಕು ಎಂದರು.

ಬರಹಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್.ಮಧುನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಅಯ್ಯನಗೌಡ, ಭಿಮಾನಾಯ್ಕ, ಬಿ.ಎಸ್.ದಲಾಯತ್ ಇದ್ದರು.

ಡಾ. ವಿಠಲ್ ರಾವ್ ಗಾಯಕವಾಡ್ ಅವರ ‘ಆದ್ವಿಜೋ’ ಎಲ್. ಮಧುನಾಯ್ಕ ಅವರ ‘ಹೂವಿನಹಡಗಲಿ ದರ್ಶನ’ ಕೃತಿಗಳು ಬಿಡುಗಡೆಯಾದವು. ಸಾಹಿತ್ಯ ಕ್ಷೇತ್ರದ ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT