ಹಂಪಿ ಕೋದಂಡರಾಮ ದೇಗುಲಕ್ಕೆ ನೀರು

7
900 ಹೆಕ್ಟೇರ್‌ ಭತ್ತದ ಗದ್ದೆಗೆ ನುಗ್ಗಿದ ನೀರು; ಒಳಹರಿವು ಇಳಿಮುಖ

ಹಂಪಿ ಕೋದಂಡರಾಮ ದೇಗುಲಕ್ಕೆ ನೀರು

Published:
Updated:
Deccan Herald

ಹೊಸಪೇಟೆ: ಪ್ರವಾಹದಿಂದಾಗಿ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ ಹಾಗೂ ಸಿರುಗುಪ್ಪದಲ್ಲಿ ಒಟ್ಟು 900 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿರುವ ಭತ್ತದ ಗದ್ದೆಗೆ ನೀರು ನುಗ್ಗಿದೆ.

ಗದ್ದೆಯಲ್ಲಿ ನೀರು ನಿಂತು ಅವುಗಳು ಹೊಂಡದ ಸ್ವರೂಪ ಪಡೆದುಕೊಂಡಿವೆ. ತಾಲ್ಲೂಕಿನ ಹಂಪಿ ಸುತ್ತಮುತ್ತಲಿನ ಮಾಗಾಣಿಯಲ್ಲಿರುವ ಬಾಳೆ ತೋಟಗಳು ಸಂಪೂರ್ಣ ಜಲಾವೃತವಾಗಿವೆ. ಹಂಪಿಯ ಕೋದಂಡರಾಮ ದೇಗುಲದ ಒಳಗೆ ಶುಕ್ರವಾರ ನೀರು ನುಗ್ಗಿದೆ. ಎರಡ್ಮೂರು ದಿನಗಳ ಹಿಂದೆ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಸಂಪೂರ್ಣ ಮುಳುಗಡೆಯಾಗಿತ್ತು.

ಕಂಪ್ಲಿ ನದಿ ದಂಡೆಯ 32 ಕುಟುಂಬಗಳನ್ನು ಕೋಟೆ ಪ್ರದೇಶದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿ, ಗಂಜಿ ಕೇಂದ್ರ ಆರಂಭಿಸಲಾಗಿದೆ. ಕೋಟೆ ಮಾಗಾಣಿ ಪ್ರದೇಶದ ಬಾಳೆ, ಸಣಾಪುರ, ಇಟಗಿ, ಬೆಳಗೋಡು ಹಾಳು ಭಾಗದ ಭತ್ತದ ಗದ್ದೆಗಳು ಜಲಾವೃತವಾಗಿವೆ. ಎಷ್ಟು ಪ್ರದೇಶದಲ್ಲಿ ನೀರು ನುಗ್ಗಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

‘ಎರಡ್ಮೂರು ದಿನಗಳಲ್ಲಿ ಪ್ರವಾಹ ತಗ್ಗಿದರೆ ಬೆಳೆ ಉಳಿಯಬಹುದು. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಭತ್ತ ಸಂಪೂರ್ಣ ಹಾಳಾಗಬಹುದು’ ಎಂದು ಅಧಿಕಾರಿ ತಿಳಿಸಿದ್ದಾರೆ.

ತಗ್ಗಿದ ಒಳಹರಿವು:

ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಶುಕ್ರವಾರ ತಗ್ಗಿದೆ. 1,68,335 ಕ್ಯುಸೆಕ್‌ ಒಳಹರಿವು ದಾಖಲಾದರೆ, 1,94,809 ಕ್ಯುಸೆಕ್‌ ಹೊರಹರಿವು ಇದೆ. ಅಣೆಕಟ್ಟೆಯ ಗರಿಷ್ಠ ನೀರಿನ ಸಂಗ್ರಹ ಮಟ್ಟ 1,633 ಅಡಿಗಳಷ್ಟಿದ್ದು, ಸದ್ಯ 1,630.05 ಅಡಿ ನೀರಿನ ಸಂಗ್ರಹವಿದೆ. ಎಲ್ಲ 35 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ. ಗುರುವಾರ 2,09,310 ಕ್ಯುಸೆಕ್‌ ಒಳಹರಿವು ಇತ್ತು. 2,31,021 ಹೊರಹರಿವು ಇತ್ತು.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !