ಶುಕ್ರವಾರ, ನವೆಂಬರ್ 15, 2019
27 °C

ಏಣಿಯಿಂದ ಬಿದ್ದು ಸಾವು

Published:
Updated:

ಹೊಸಪೇಟೆ: ತಾಲ್ಲೂಕಿನ ಹಂಪಿಯಲ್ಲಿನ ರಾಜ್ಯ ಪುರಾತತ್ವ ಕಚೇರಿಯ ಆವರಣದಲ್ಲಿ ಕಟ್ಟಿಗೆಯ ಏಣಿ ಏರಿ ಮರದ ಕೊಂಬೆಗಳನ್ನು ಕಡಿಯುತ್ತಿದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದು ದಿನಗೂಲಿ ನೌಕರ ಮೌಲಾ ಸಾಬ್‌ (48) ಶುಕ್ರವಾರ ಮೃತಪಟ್ಟಿದ್ದಾರೆ.

‘ಗುರುವಾರ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದ ಮೌಲಾ ಸಾಬ್‌, ಶುಕ್ರವಾರ ಬೆಳಿಗ್ಗೆ ಏಣಿಯ ಸಹಾಯದಿಂದ ಮರದ ಕೊಂಬೆಗಳನ್ನು ಕಡಿಯುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಹಂಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)