ಭಾನುವಾರ, ಆಗಸ್ಟ್ 25, 2019
21 °C
ಪ್ರಜಾವಾಣಿ ವೆಬ್‌ಸೈಟಿನಲ್ಲಿ ಪ್ರಕಟವಾದ ಸುದ್ದಿ ನೋಡಿ ನಿಟ್ಟುಸಿರು ಬಿಟ್ಟ ಜನ

ಡ್ಯಾಂ ಒಡೆದಿದೆಯಂತಲ್ಲ, ನಿಜವೇ?

Published:
Updated:

ಹೊಸಪೇಟೆ: ‘ತುಂಗಭದ್ರಾ ಜಲಾಶಯ ಒಡೆದಿದೆಯಂತಲ್ಲ. ಇದು ನಿಜವೇ?’ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಸಾರ್ವಜನಿಕರು ಇಲ್ಲಿನ ‘ಪ್ರಜಾವಾಣಿ’ ವರದಿಗಾರರಿಗೆ ಕರೆ ಮಾಡಿ ಮೇಲಿನಂತೆ ಪ್ರಶ್ನಿಸಿದರು.

ಮಂಗಳವಾರ ಬೆಳಿಗ್ಗೆ ಅಣೆಕಟ್ಟೆಯ ಎಡದಂಡೆ ಮುಖ್ಯ ಕಾಲುವೆಯ ಒಂದು ಭಾಗ ಒಡೆದು, ಅಪಾರ ಪ್ರಮಾಣದ ನೀರು ಮುನಿರಾಬಾದ್‌ನ ಪಂಪಾವನ ಆವರಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಈ ಸುದ್ದಿ, ಅದರ ಚಿತ್ರಗಳು ಸಾಮಾಜಿಕ ಹರಿದಾಡಿದವು. ‘ಮುನಿರಾಬಾದ್‌ ತೊರೆಯಲು ಜನ ಮುಂದಾಗಿದ್ದಾರೆ. ಜಲಾಶಯ ಮುಂಭಾಗದ ಊರುಗಳ ಜನ ಬೇರೆ ಕಡೆಗೆ ಹೋಗುತ್ತಿದ್ದಾರೆ. ಇದು ನಿಜವಾದ ಸುದ್ದಿಯೇ’ ಎಂದು ಕೇಳಿ ಜನ ಕರೆ ಮಾಡಿದ್ದರು. ಎಲ್ಲೆಡೆ ಒಂದು ರೀತಿಯಲ್ಲಿ ಆತಂಕ ಮನೆ ಮಾಡಿತ್ತು.

‘ಯಾರು ಆತಂಕಪಡುವುದು ಬೇಡ. ಕಾಲುವೆಯ ಒಂದು ಭಾಗ ಹಾಳಾಗಿ ನೀರು ಹರಿದು ಹೋಗುತ್ತಿದೆ. ಡ್ಯಾಂ ಒಡೆದಿಲ್ಲ’ ಎಂದು ತುಂಗಭದ್ರಾ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಬಸಪ್ಪ ಜಾನಕೆರೆ ‘ಪ್ರಜಾವಾಣಿ’ಗೆ ತಿಳಿಸಿದರು. ಈ ವಿಷಯ ಪತ್ರಿಕೆಯ ವೆಬ್‌ಸೈಟಿನಲ್ಲಿ ಪ್ರಕಟಿಸಿದಾಗ, ಅದನ್ನು ನೋಡಿ ಜನ ನಿಟ್ಟುಸಿರು ಬಿಟ್ಟರು. ಈ ಸುದ್ದಿಯ ಲಿಂಕ್‌ ದಿನವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಇದನ್ನೂ ಓದಿ:

‘ಒಡೆದಿರುವುದು ಕಾಲುವೆ; ತುಂಗಾ ಭದ್ರಾ ಡ್ಯಾಂ ಅಲ್ಲ’ ಅಧಿಕಾರಿಗಳ ಸ್ಪಷ್ಟನೆ, ಆತಂಕ ಬೇಡ

Post Comments (+)